ದಾವಣಗೆರೆ, ಮಾ. 11 – ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಸಮ್ಮಿಲನ ಸಮಾವೇಶವನ್ನು ನಾಳೆ ದಿನಾಂಕ 12 ಹಾಗೂ 13 ರಂದು ಹರಿಹರದಲ್ಲಿ ಸ್ವಾಭಿಮಾನಿ ನಾಯಕ ಪ್ರೊ. ಬಿ. ಕೃಷ್ಣಪ್ಪ ಅವರ ಚೈತ್ಯಭೂಮಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕಬ್ಬಳ್ಳಿ ಮೈಲಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಾಳೆ ದಿನಾಂಕ 12 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ದಿನಾಂಕ 13 ರ ಭಾನುವಾರ ಮಧ್ಯಾಹ್ನ 3ಗಂಟೆಗೆ ಅಂಬೇಡ್ಕರ್ ಅವರು ತಾತ್ವಿಕ-ಸೈದ್ಧಾಂತಿಕ ಹೋರಾಟ ಮತ್ತು ರಾಜಕಾರಣ ಚರ್ಚಾ ಮತ್ತು ನಿರ್ಣಯ ಕೈಗೊಳ್ಳಲಾ ಗುವುದು. ರಾತ್ರಿ 8-30ಕ್ಕೆ ಜಂಟಿ ರಾಜ್ಯ ಕಾರ್ಯಕಾರಣಿ ಸಭೆ ಹಮ್ಮಿಕೊಳ್ಳಲಾಗುವುದು ಎಂದರು.
ಡಿ.ಎಸ್- 4 ಕರ್ನಾಟಕದ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕದಸಂಸ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸಂಪನ್ಮೂಲ ಕೇಂದ್ರದ ಮಾಜಿ ನಿರ್ದೇಶಕ ಡಾ. ತುಕಾರಾಂ ಪ್ರಧಾನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ. ದೇವದಾಸ್, ವಿ. ನಾರಾಯಣ ಸ್ವಾಮಿ, ಕೃಷ್ಣಪ್ಪ ಬೆಲ್ಲದ ಮಾಡು, ಹೆಗ್ಗೆರೆ ರಂಗಪ್ಪ ಉಪಸ್ಥಿತರಿರುವವರು.
ಭಾಗ್ಯಮ್ಮ ನಾರಾಯಣ ಸ್ವಾಮಿ, ಕವಾಲಿ ವೆಂಕಟರಮಣಪ್ಪ, ರಾಜಕುಮಾರ್ ಮೂಲಭಾರತಿ, ಪಿ.ಎಂ. ಕೃಷ್ಣಪ್ಪ , ಕಬ್ಬಳ್ಳಿ ಭೈರಪ್ಪ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದರು.
ಸಮಾರೋಪ ಭಾಷಣವನ್ನು ವೆಂಕಟಗಿರಿಯಯ್ಯ ಮಾಡಲಿದ್ದು, ಎಂ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿ ದ್ದಾರೆ. ಸಮ್ಮಿಲನ ಸಮಾವೇಶ ದಲಿತ ಸಂಘಟನೆಗೆ ದೊಡ್ಡ ಶಕ್ತಿ ನೀಡಲಿದೆ. ಡಿ.ಎಸ್-4 ಕರ್ನಾಟಕ ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ ತಿಳಿಸಿದರು.
ಹೂವಿನಮಡು ಅಂಜಿನಪ್ಪ, ಸಂತೋಷ ಎನ್. ನೋಟದವರ್, ಶಾಂತರಾಜು ಹಾರೋಹಳ್ಳಿ, ಗುಮ್ಮನೂರು ರಾಮಚಂದ್ರಪ್ಪ, ಸತೀಶ್ ಮಲೇಮಾಚಿಕೆರೆ, ರಾಜನಹಳ್ಳಿ ಮಂಜುನಾಥ್, ಅಳಗವಾಡಿ ನಿಂಗರಾಜ್, ಗಾಂಧಿನಗರ ರಾಜು, ಕೈದಾಳೆ ಮಂಜುನಾಥ್, ನಾಗನೂರು ರಾಜು, ಬೆಳವನೂರು ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.