ಸರ್ಕಾರಿ ನೌಕರರ ಹಿತ ಕಾಯಲು ಬದ್ಧ : ಷಡಾಕ್ಷರಿ

ಹರಿಹರದಲ್ಲಿ ನೌಕರರ ನೂತನ ವಸತಿ ಗೃಹಗಳ ಉದ್ಘಾಟನೆ

ಹರಿಹರ, ಮಾ. 11- ರಾಜ್ಯ ಸರ್ಕಾರಿ ನೌಕರರು ಸ್ವಾಭಿಮಾನದಿಂದ ಜೀವನ ನಡೆಸುವು ದಕ್ಕೆ ಯಾವುದೇ ರೀತಿಯ ತೊಂದರೆ ಬರದಂತೆ ಸರ್ಕಾರಿ ನೌಕರರ ಹಿತ ಕಾಯುವ ಕೆಲಸವನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಮಾಡುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.

ನಗರದ ಗುರುಭವನದ ಸಭಾಂಗಣದಲ್ಲಿ ಸರ್ಕಾರಿ ನೌಕರರ ತಾಲ್ಲೂಕು ಸಂಘದ ವತಿಯಿಂದ ಮೊನ್ನೆ ನಡೆದ ನೌಕರರ ನೂತನ ವಸತಿ ಗೃಹಗಳ ಉದ್ಘಾಟನೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕೇಂದ್ರ ವೇತನ ಆಯೋಗದ ಮಾದರಿಯಲ್ಲಿ ರಾಜ್ಯ ನೌಕರರಿಗೆ ವೇತನ ಕೊಡಿಸುವ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ರೀತಿಯ ಹೋರಾಟ ನಡೆಸಿದ್ದು, ಈಗ ಚುನಾವಣೆ ವರ್ಷವಾಗಿರೋದರಿಂದ ಅದನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೇವೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಸಂಘವು ನೌಕರರ ಹಿತಕ್ಕಾಗಿ ಹೋರಾಟ ಮಾಡಿ ಹಬ್ಬಕ್ಕೆ 10 ಸಾವಿರ, ಬಡ್ಡಿ ರಹಿತ 25 ಸಾವಿರ ಮತ್ತು ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ 6 ತಿಂಗಳು ಮನೆಯಲ್ಲಿ ಇದ್ದು ವೇತನ ಪಡೆಯವ ವ್ಯವಸ್ಥೆ ಮತ್ತು ಕೊರೊನಾ ಸಮಯದಲ್ಲಿ 2 ವರ್ಷ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವೇತನವನ್ನು ಕೊಡಿಸುವ ಕಾರ್ಯವನ್ನು ಅಂದಿನ ಸಿ.ಎಂ. ಬಿ.ಎಸ್ ಯಡಿಯೂರಪ್ಪ ನವರ ಆಡಳಿತದಲ್ಲಿ ಮಾಡಿಸಲಾಯಿತು ಎಂದವರು ಹೇಳಿದ್ದಾರೆ.

ಶಾಸಕ ಎಸ್. ರಾಮಪ್ಪ ಮಾತನಾಡಿ, ಸರ್ಕಾರಿ ನೌಕರರು ಕೊರೊನಾ ಸಮಯದಲ್ಲಿ ಮನೆಯಲ್ಲಿ ಕುಳಿತುಕೊಳ್ಳದೆ ಉತ್ತಮ ಕರ್ತವ್ಯ ವನ್ನು ಮಾಡಿದ್ದಾರೆ. ಅವರ ಏಳಿಗೆಗಾಗಿ ಸರ್ಕಾರ ಆದ್ಯತೆ ಕೊಡಬೇಕು ಎಂದು ಹೇಳಿದರು.

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸರ್ಕಾರಿ ನೌಕರರು ತಮ್ಮ ಕುಟುಂಬದ ಎಷ್ಟೋ ಸಮಸ್ಯೆಗಳು ಇದ್ದರೂ, ಅದನ್ನು ಹೊರಗಡೆ ತೋರಿಸಿಕೊಳ್ಳದೆ, ಸಾರ್ವಜನಿಕರ ಕೆಲಸಗಳಿಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ ಎಂದು ಹೇಳಿದರು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ನೌಕರರು ಮತ್ತು ರಾಜಕೀಯ ಪಕ್ಷದವರು  ರಥೋತ್ಸವದ ಎರಡು ಗಾಲಿ ಇದ್ದಂತೆ. ರಾಜ್ಯದಲ್ಲಿ ಸರ್ಕಾರಿ ನೌಕರರ ಸಂಘವು ಬಲಿಷ್ಠವಾದ ಶಕ್ತಿಯನ್ನು ಹೊಂದಿದೆ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ. ಪಾಲಾಕ್ಷ ಮಾತನಾಡಿ, ರಾಜ್ಯದಲ್ಲಿ ಎನ್.ಪಿ.ಎಸ್. ವ್ಯವಸ್ಥೆ ತೊಲಗಿಸಿ ಓ.ಪಿ.ಎಸ್ ವ್ಯವಸ್ಥೆಗೆ ಸರ್ಕಾರ ಮುಂದಾಗಬೇಕು. ಜೊತೆಗೆ ಖಾಲಿ ಇರುವ  2 ಲಕ್ಷದ 60 ನೌಕರರನ್ನು ನೇಮ ಕಾತಿ ಮಾಡಬೇಕು ಎಂದು ಒತ್ತಾಯಿಸಿದರು.

ಹರಿಹರ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ಎಲ್ಲರೂ ಉತ್ತಮ ಸಹಕಾರ ನೀಡುತ್ತಿರು ವುದರಿಂದ ಇಂದು ನೂತನ ಕಟ್ಟಡ ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಯಿತು ಎಂದು ಹೇಳಿದರು. ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಬಗ್ಗೆ ಶಿವಮೊಗ್ಗದ ಡಾ. ಜಿ.ವಿ. ಹರಿಪ್ರಸಾದ್ ಉಪನ್ಯಾಸ ನೀಡಿದರು.

ಬಿಇಓ ಬಿ.ಸಿ. ಸಿದ್ದಪ್ಪ, ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಎಪಿಎಂಸಿ ಅಧ್ಯಕ್ಷ ಮಂಜುನಾಥ್ ಪಾಟೀಲ್, ಪ್ರಾಥಮಿಕ ಶಾಲೆ ಸಂಘದ ಅಧ್ಯಕ್ಷ ಚಂದ್ರಪ್ಪ ದೊಗ್ಗಳ್ಳಿ, ಸಿಡಿಪಿಓ ನಿರ್ಮಲ, ಎನ್.ಪಿ.ಎಸ್. ಸಿದ್ದಣ್ಣ, ತಿಪ್ಪಣ್ಣ ರಾಜ್, ನೌಕರರ ಸಂಘದ ಪ್ರಧಾನ ಕಾರ್ಯ ದರ್ಶಿ ಡಿ.ಟಿ. ಮಂಜುನಾಥ್, ಖಜಾಂಚಿ ಪಿ. ಶಿವಮೂರ್ತಿ, ರಾಜ್ಯ ಪರಿಷತ್ ಸದಸ್ಯ ವಿಜಯ ಮಹಾಂತೇಶ್, ಗೌರವ ಅಧ್ಯಕ್ಷರಾದ ಎಂ. ಉಮ್ಮಣ್ಣ, ಎ.ಕೆ. ಭೂಮೇಶ್, ಉಪಾಧ್ಯಕ್ಷ ಶಿವಕುಮಾರಸ್ವಾಮಿ, ವೈ.ಪಿ. ಸಾಕಮ್ಮ, ಪ್ರಕಾಶ್, ಹರೀಶ್ ನೋಟಗಾರ, ಶಾಮನೂರು ರಾಮನಗೌಡ, ಡಿ.ಎಸ್. ಅರವಿಂದ್, ಸಾಹಿತಿ ಸುಮತಿ ಉಪಸ್ಥಿತರಿದ್ದರು.

error: Content is protected !!