ಬೇಸಿಗೆಯ ಆರಂಭದಲ್ಲಿಯೇ ಬಿಸಿಲಿನ ತಾಪಕ್ಕೆ ಜನ ಬೆಚ್ಚಿ ಬೀಳಲಾರಂಭಿಸಿದ್ದಾರೆ. ನೀರನ್ನು ತಂಪಾಗಿರಿಸುವ ಮಣ್ಣಿನ ಮಡಿಕೆಗಳ ಖರೀದಿಗೆ ಜನ ಮುಂದಾಗುತ್ತಿದ್ದಾರೆ. ಒಂದು ಲೀಟರ್ ನೀರು ಕೊಂಡೊಯ್ಯಬಲ್ಲ ವಾಟರ್ ಬಾಟಲ್ ಮಾದರಿಯ ಮಡಿಕೆಗಳೂ ಆಕರ್ಷಿಸುತ್ತಿವೆ. ದಾವಣಗೆರೆಯ ಹದಡಿ ರಸ್ತೆಯಲ್ಲಿ ಮಹಿಳೆ ಮಡಿಕೆ ಮಾರಾಟದಲ್ಲಿ ನಿರತರಾಗಿದ್ದಾರೆ. ಬುಧವಾರ ನಗರದ ಹಲವೆಡೆ ಮಹಿಳಾ ದಿನಾಚರಣೆ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಇತ್ತ ಈ ಮಹಿಳೆ ತನ್ನ ಪಾಡಿಗೆ ತಾನು ಕಾಯಕದಲ್ಲಿ ನಿರತರಾಗಿದ್ದರು.
November 24, 2024