ಲೋಕ ಕಲ್ಯಾಣಾರ್ಥವಾಗಿ ಅಜ್ಜಯ್ಯನಿಗೆ ರಾಜೋಪಚಾರ
ಮಲೇಬೆನ್ನೂರು, ಮಾ.7- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಫಳಾರ ಹಾಕಿಸುವ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು.
ಹರಕ್ಕೆ ಹೊತ್ತ ಭಕ್ತರು ಹಾಕುವ ಈ ಮಂಡಕ್ಕಿ ಫಳಾರವನ್ನು ಬುಧವಾರ ಎಲ್ಲಾ ಭಕ್ತರಿಗೆ ಹಂಚಲಾಗುವುದೆಂದು ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ತಿಳಿಸಿದರು.
ನಂತರ ಲೋಕ ಕಲ್ಯಾಣಾರ್ಥವಾಗಿ ಅಜ್ಜಯ್ಯನಿಗೆ ವಿಶೇಷ ರಾಜೋಪಚಾರ ಮಹಾಪೂಜೆಯನ್ನು ದಯಾನಂದ ಶಾಸ್ತ್ರಿ ಮತ್ತು ಸಹ ಅರ್ಚಕರಿಂದ ಮಾಡಿಸಲಾಯಿತು.
ರಾತ್ರಿ ಚಂದ್ರಶೇಖರ್ ಪೂಜಾರ್ ಅಭಿಮಾನಿ ಬಳಗದಿಂದ ರಸಮಂಜರಿ ಕಾರ್ಯಕ್ರಮವನ್ನು ಡಿಜೆ ಮೆರವಣಿಗೆಯೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಜ್ಜಯ್ಯನ ಬೆಳ್ಳಿ ರಥೋತ್ಸವ ಮತ್ತು ರಾತ್ರಿ 8 ಗಂಟೆಗೆ ಅಜ್ಜಯ್ಯನ ಪಾಲಿಕೋತ್ಸವ ಜರುಗಲಿದೆ.