ರಾಣೇಬೆನ್ನೂರು, ಮಾ.6- ರಷ್ಯಾ-ಉಕ್ರೇನ್ ಸಂಘರ್ಷ ಪ್ರಾರಂಭವಾಗುತ್ತಲೇ ಚಳಗೇರಿಯ ದಿ. ನವೀನ್ ಕಾಲೇಜು ಜೊತೆಗಾರ ದ್ವಿತೀಯ ವರ್ಷದ ವೈದ್ಯ ಕೀಯ ವಿದ್ಯಾರ್ಥಿ ರಾಣೇಬೆನ್ನೂರು ನಗ ರದ ನಿವಾಸಿ ಮಂಜುನಾಥ ಶಿವಲಿಂಗಪ್ಪ ನವರ ಮಗ ಗಣೇಶ ಇಂದು ಉಕ್ರೇನ್ನಿಂದ ನಗರಕ್ಕೆ ಮರಳಿ ಬಂದಿದ್ದು, ಮನೆಯಲ್ಲಿ ಚೌತಿಯ ಸಂಭ್ರಮ ಕಂಡುಬಂದಿತು. ಪತ್ರಕರ್ತರೆದುರು ಅಲ್ಲಿನ ಜನತೆ ನೀಡಿದ ಸಹಾಯ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಬರುವಿಕೆಗೆ ಮಾಡಿದ ಸೌಲಭ್ಯ ಕುರಿತು ವಿವರಿಸಿ, ಮುಂದೆನ ವಿದ್ಯಾಭ್ಯಾಸಕ್ಕೆ ಸೂಕ್ತ ಮಾರ್ಗದರ್ಶನ ಮಾಡುವಂತೆ ಮನವಿ ಮಾಡಿದರು. ವಿಮಾನದಲ್ಲಿ ಬೆಂಗಳೂರು ನಂತರ ರಾಜ್ಯ ಸಾರಿಗೆ ಬಸ್ನಲ್ಲಿ ಬಂದ ಗಣೇಶ ಅವರನ್ನು ಸರ್ಕಾರದ ಪರವಾಗಿ ಬಸ್ ನಿಲ್ದಾಣದಲ್ಲಿ ತಹಶೀಲ್ದಾರ್ ಶಂಕರ್ ಸ್ವಾಗತಿಸಿಕೊಂಡರು.
February 25, 2025