ವಾರದೊಳಗೆ ಅಕ್ರಮ ಮನೆ-ಮಳಿಗೆ ತೆರವಿಗೆ ಶಾಸಕ ರಾಮಚಂದ್ರ ಸೂಚನೆ

ಹರಪನಹಳ್ಳಿ, ಫೆ.25- ಅರಸಿಕೆರೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಮಂಡ್ಯ-ಹಡಗಲಿ 47 ರಾಜ್ಯ ಹೆದ್ದಾರಿ ವಿಸ್ತರಣೆ ಅನಿವಾರ್ಯವಾಗಿದ್ದು, ರಸ್ತೆ ಮಧ್ಯಭಾಗದಿಂದ 35 ಅಡಿ ಮಿತಿಯೊಳಗೆ ಬರುವ ಅಕ್ರಮ ಮನೆ, ಮಳಿಗೆಯನ್ನು ವಾರದ ಗಡುವಿನೊಳಗೆ ತೆರವುಗೊಳಿಸುವಂತೆ ಶಾಸಕ ಎಸ್.ವಿ ರಾಮಚಂದ್ರ ಸೂಚಿಸಿದರು. 

ಅರಸಿಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಶಾಂತಿ ಸಭೆ ನಡೆಸಿ ಮಾತನಾಡಿದ ಅವರು, ರಸ್ತೆ ವಿಸ್ತರಣೆಯಿಂದ ಭಾಗಶಃ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಗ್ರಾಮದಲ್ಲಿ ಸರ್ಕಾ ರದ ಜಾಗ ಗುರುತಿಸಿ ಆಶ್ರಯ ಮನೆಯ ಭರವಸೆ ನೀಡಿದರು. 

ಹರಪನಹಳ್ಳಿ ತಾಲ್ಲೂಕು ಅಲ್ಲದೆ, ಜಗಳೂರು ವಿಧಾನ ಸಭಾ ಕ್ಷೇತ್ರದ ಅತೀ ದೊಡ್ಡ ಹೋಬಳಿ ಕೇಂದ್ರವಾಗಿದೆ. ಮಾದರಿ ಹೋಬಳಿ ಕೇಂದ್ರವಾಗಿಸಲು ಸ್ವಯಂ ಪ್ರೇರಿತರಾಗಿ ಸಹಕಾರ ನೀಡ ಬೇಕು. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣೆಯದೇ ನಿಗದಿತ ಅಳತೆಯನ್ನು ಗುರು ತಿಸಬೇಕು. ಕಾಮಗಾರಿಯನ್ನು ಮುಂದಿನ ಕಾರ್ತಿಕೋತ್ಸವದ ಜಾತ್ರೆಯ ಒಳಗೆ ಮುಗಿಸಬೇಕು ಎಂದು ಸೂಚಿಸಿದರು.

ಪಿಡಬ್ಲ್ಯೂಡಿ ಇಂಜಿನಿಯರ್ ನಿಂಗಪ್ಪ ಮಾತನಾಡಿ, ರಾಜ್ಯ ಹೆದ್ದಾರಿಯನ್ನು ರಸ್ತೆ ಮಧ್ಯದಿಂದ 40 ಅಡಿ ನಿರ್ಮಾಣ ಮಾಡುವ ನಿರ್ದೇಶನ ಇದೆ. ಆದರೆ ಶಾಸಕರ ಸೂಚನೆ ಮೇರೆಗೆ 35 ಅಡಿ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಕೂಡಲೇ ನಿವಾಸ, ಮಳಿಗೆ ತೆರವುಗೊಳಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು. 

ಇಲಾಖೆಯಿಂದ ಮನೆ ತೆರವುಗೊಳಿಸಿ ನಿರಾಶ್ರಿತರಿಗೆ ಮಾನವೀಯತೆ ಆಧಾರ ದಲ್ಲಿ ಪರಿಹಾರ ನೀಡುವಂತೆ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಇಲಾಖೆಯಿಂದ ಪರಿಹಾರ ನೀಡುವ ವ್ಯವಸ್ಥೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮಧ್ಯ ಪ್ರವೇಶಿಸಿದ ಶಾಸಕ ಎಸ್.ವಿ ರಾಮಚಂದ್ರ ನಿವೇಶನದ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ ಲಕ್ಷ್ಮಣ, ಉಪಾಧ್ಯಕ್ಷ ಅಡ್ಡೇರ ಚನ್ನವೀರಪ್ಪ, ಮುಖಂಡರಾದ ವೈ.ಡಿ ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಸಲಾಂ ಸಾಬ್, ಆನಂದಪ್ಪ, ಕೆ.ಎಂ ವಿಶ್ವನಾಥಯ್ಯ, ಕೊಟ್ರೇಶ್, ಪಂಪಣ್ಣ, ವೆಂಕಟೇಶ್
ಶೆಟ್ರು ಇದ್ದರು.

error: Content is protected !!