ಭಜರಂಗದಳದ ಸಹ ಸಂಯೋಜಕ ಹರ್ಷ ಹತ್ಯೆ ಖಂಡಿಸಿ ಪ್ರತಿಭಟನೆ

ಹರಪನಹಳ್ಳಿ, ಫೆ. 23- ಶಿವಮೊಗ್ಗದ ಭಜರಂಗದಳದ ಸಹ ಸಂಯೋಜಕ, ದೇಶಭಕ್ತ ಹರ್ಷ ಅವರನ್ನು ದೇಶದ್ರೋಹಿ ಸಂಘಟನೆಗಳು ಹತ್ಯೆ ಮಾಡಿರುವುದನ್ನು ಖಂಡಿಸಿ, ಪಟ್ಟಣದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇಲ್ಲಿನ ಕೋಟೆ ಆಂಜನೇಯ ದೇವಸ್ಥಾನದ ಆವರಣದಿಂದ ಹೊಸಪೇಟೆ ರಸ್ತೆ ಮೂಲಕ ಪ್ರವಾಸಿ ಮಂದಿರ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ಅಲ್ಲಿ ಬಹಿರಂಗ ಸಭೆ ನಡೆಸಿದರು.

ವಿಹೆಚ್‌ಪಿ ತಾಲ್ಲೂಕು ಅಧ್ಯಕ್ಷ ಹೆಚ್.ಎಂ. ಜಗದೀಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಮುಖಂಡರಾದ ಎಂ.ಪಿ. ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುವರ್ಣ ನಾಗರಾಜ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ಜಿ. ನಂಜನ ಗೌಡ, ಜೆ. ಓಂಕಾರಗೌಡ, ನಿಟ್ಟೂರು ಸಣ್ಣ ಹಾಲಪ್ಪ, ಚಂದ್ರಶೇಖರ ಪೂಜಾರ, ಶಿರಗಾನಹಳ್ಳಿ ವಿಶ್ವನಾಥ, ರಾಘವೇಂದ್ರ ಶೆಟ್ಟಿ, ಆರ್. ಲೋಕೇಶ್, ಲಿಂಬ್ಯಾನಾಯ್ಕ, ಕುಸುಮಾ ಜಗದೀಶ್, ಮಲ್ಲೇಶ, ಓಂಕಾರಗೌಡ, ಆರ್ಎಸ್ಎಸ್‌ನ ಸತ್ಯನಾರಾಯಣ, ರಾಹುಲ್, ಮಂಜಾ ನಾಯ್ಕ, ನಿಟ್ಟೂರು ಸುರೇಶ್, ಅಶೋಕ ಹಿಂದೂಸ್ಥಾನ್, ಹಾಲೇಶ್ ಹಿಂದೂಸ್ಥಾನ್,  ಸುರೇಂದ್ರ ಮಂಚಾಲಿ, ಕೆ. ಮಂಜುನಾಥ, ಮಂಜ್ಯನಾಯ್ಕ, ಲಿಂಬ್ಯನಾಯ್ಕ, ಕಿರಣ್‌ ಶ್ಯಾನಭೋಗ್, ರಾಘವೇಂದ್ರ ಶೆಟ್ಟಿ, ಕುಸುಮಾ ಜಗದೀಶ, ಲತಾ ನಾಗರಾಜ, ಬಾಗಳಿ ಎನ್. ಮಂಜುನಾಥ, ಬಣಕಾರ ಜಗದೀಶ, ಆಲೂರು ಶ್ರೀನಿವಾಸ, ಮ್ಯಾಕಿ ಅಜ್ಜಯ್ಯ, ಎನ್. ಸುರೇಶ್, ಮಲ್ಲೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!