ಗ್ರಾ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಜಿ.ಪಂ. ಸಿಇಒ ಕರೆ
ದಾವಣಗೆರೆ, ಫೆ.22- ಜಲಜೀವನ್ ಮಿಷನ್ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವಂತೆ ಗ್ರಾಮ ಪಂಚಾಯ್ತಿಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಕರೆ ನೀಡಿದರು.
ಸೊಸೈಟಿ ಫಾರ್ ಪೀಪಲ್ಸ್ ಇಂಟಿಗ್ರೇಟೆಡ್ ಡೆವಲಪ್‍ಮೆಂಟ್ ಸಹಯೋಗದಲ್ಲಿ ನಗರದ ಹೊರ ವಲಯದಲ್ಲಿರುವ ಜೆನಿಸಿಸ್ ರಿಟ್ರೀಟ್ ಹೋಟೆಲ್‍ನಲ್ಲಿ ಜಲ ಜೀವನ್ ಮಿಷನ್ ಕುರಿತು ಗ್ರಾಮ ಪಂಚಾಯಿತಿ ಹಾಗೂ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ 4 ದಿನಗಳ ಕಾಲ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಕಾಮಗಾರಿಗಳು ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ಸಾಗಿದ್ದು, 2024 ರೊಳಗೆ ಜಿಲ್ಲೆಯ ಎಲ್ಲಾ ಕಂದಾಯ ಮತ್ತು ಜನವಸತಿ ಗ್ರಾಮಗಳ ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಯೋಜನೆ ಮೂಲಕ ಪ್ರತಿ ಮನೆ ಮನೆಗೂ ನೀರು ಒದಗಿಸುವ ಉದ್ದೇಶದಿಂದ ಕಾರ್ಯಗಾರ ಅಯೋಜನೆ ಮಾಡಲಾಗಿದೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳ ಪಾತ್ರದ ಜೊತೆಗೆ ಜನಸಮುದಾಯಗಳ ಸಹಕಾರ ಮುಖ್ಯವಾಗಿದೆ. ಜಲ ಜೀವನ್ ಮಿಷನ್ ಯೋಜನೆಯಿಂದ ನೀರು ಒದಗಿಸುವುದು ಮಾತ್ರವಲ್ಲದೆ ವಿದ್ಯುಚ್ಚಕ್ತಿಯ ಉಳಿತಾಯವೂ ಆಗಲಿದೆ ಎಂದರು.
2024ಕ್ಕೆ ಎಲ್ಲಾ ಮನೆಗಳಿಗೂ ನೀರು : ಜಿ.ಪಂ. ಸಿಇಒ
ಜಿಲ್ಲೆಯಲ್ಲಿ 693 ಕಂದಾಯ ಗ್ರಾಮಗಳು ಮತ್ತು 876 ಜನವಸತಿ ಪ್ರದೇಶಗಳಿವೆ. ಇದರಲ್ಲಿ 2020-21ನೇ ಸಾಲಿನಲ್ಲಿ 356 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಆರಂಭಿಸಿದ್ದು, 161 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಉಳಿದವುಗಳ ಕಾಮಗಾರಿ ಪ್ರಗತಿಯಲ್ಲಿದೆ. 2021-22ನೇ ಸಾಲಿನಲ್ಲಿ 125 ಕಾಮಗಾರಿಗಳಲ್ಲಿ 90 ಕಾಮಗಾರಿಗಳು ಪೂರ್ಣಗೊಂಡಿದ್ದು 35 ಪ್ರಗತಿಯಲ್ಲಿವೆ. 2024 ರೊಳಗೆ ಜಿಲ್ಲೆಯ ಎಲ್ಲಾ ಮನೆಗಳಿಗೂ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಬದುಕಿಗೆ ನೀರು ಅತೀ ಮುಖ್ಯವಾಗಿದ್ದು, ನೀರಿನ ಬಗ್ಗೆ ಕಾಳಜಿವಹಿಸುವುದು ಅವಶ್ಯಕವಾಗಿದೆ. ಜನಸಂಖ್ಯೆ ಹೆಚ್ಚಾದಂತೆ ನೀರಿನ