ಮಡಿವಾಳ ಸಮುದಾಯಕ್ಕೆ ನೆರವು

ದಾವಣಗೆರೆ, ಫೆ. 15-  ಕುಲಕಸುಬು ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬಾರದೇ ಇರುವ ಮಡಿವಾಳ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳು ದೊರಕಬೇಕು. ಈ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಮಡಿಕಟ್ಟೆ ಯುವಕರ ಸಂಘದ ನೂತನ ಅಧ್ಯಕ್ಷ ಕಿಶೋರ್ ಕುಮಾರ್ ಭರವಸೆ ನೀಡಿದರು.

ನಗರದ ರಾಷ್ಟ್ರೀಯ ಹೆದ್ದಾರಿ-4 ಜಿಲ್ಲಾ ಪಂಚಾಯತ್ ಸಮೀಪದಲ್ಲಿ ಇರುವ ಮಡಿಕಟ್ಟೆಯಲ್ಲಿ ನಡೆದ (ಧೋಬಿ ಘಾಟ್) ಮಡಿಕಟ್ಟೆಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ನಂತರ ಮಾತನಾಡಿ, ದಾವಣಗೆರೆಯ ಮಡಿಕಟ್ಟೆಗೆ ಕಟ್ಟಡವಿದ್ದು, ಇಲ್ಲಿಗೆ ಸುಮಾರು 47 ಲಕ್ಷ ರೂ.ಮೌಲ್ಯದ 5 ಬಟ್ಟೆ ತೊಳೆಯುವ ಯಂತ್ರಗಳು (ವಾಷಿಂಗ್ ಮೆಷಿನ್) ಅಗತ್ಯವಿದ್ದು, ಈ ಕುರಿತು ಜನಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರೂ, ಕಾರ್ಮಿಕ ಮುಖಂಡರೂ ಆದ ಹೆಚ್.ಜಿ.ಉಮೇಶ್ ಆವರಗೆರೆ ಮಾತನಾಡಿ, ಮೂಲ ಭೂತ ಸೌಲಭ್ಯಗಳನ್ನು ಪಡೆಯಲು ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.

ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಯೊಂದಿಗೆ ಉಪಾಧ್ಯಕ್ಷರಾಗಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಬಿ.ಬಸವರಾಜ, ಜಂಟಿ ಕಾರ್ಯದರ್ಶಿಯಾಗಿ ಎಸ್.ನಿಂಗರಾಜ್, ಸಂಘಟನಾ ಕಾರ್ಯದರ್ಶಿಯಾಗಿ ಎಂ.ರವಿ, ಖಜಾಂಚಿಯಾಗಿ ಗುತ್ಯೆಪ್ಪ, ಸಹ ಖಜಾಂಚಿಯಾಗಿ ಪ್ರವೀಣ್, ನಿರ್ದೇಶಕರಾಗಿ ಬಿ.ರವಿಕುಮಾರ್, ಕೃಷ್ಣಮೂರ್ತಿ, ಲಂಕೇಶ್, ಜಗದೀಶ್ ಹಾಗೂ ಸಲಹಾ ಸಮಿತಿ ಸದಸ್ಯರನ್ನಾಗಿ ಮಡಿಕಟ್ಟೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಜಿಲ್ಲಾ ಸಂಘದ ಮಾಧ್ಯಮ ಸಲಹೆಗಾರ, ಪತ್ರಕರ್ತ ಎಂ.ವೈ.ಸತೀಶ್, ನಿಕಟಪೂರ್ವ ಅಧ್ಯಕ್ಷ ಫಕ್ಕೀರಸ್ವಾಮಿ, ಡೈಮಂಡ್ ಮಾಲತೇಶ್, ದೊಡ್ಡಾಳ್ ನಿಂಗಣ್ಣ, ಎಂ.ಮಲ್ಲೇಶಪ್ಪ, ಹನುಮಂತಪ್ಪ, ಮಂಜುನಾಥ್, ಪರಶುರಾಮ, ನಾಗರಾಜ್,

ಹನುಮಂತ, ಅಜ್ಜಯ್ಯ, ಶಂಕರ್, ಮಡಿವಾಳಪ್ಪ ಸೇರಿದಂತೆ ನೂತನ ಪದಾಧಿಕಾರಿಗಳು ಇದ್ದರು.

error: Content is protected !!