39ನೇ ವಾರ್ಡಿನಲ್ಲಿ ಮಹಿಳಾ ವ್ಯಾಯಾಮ ಶಾಲೆಗೆ ಗುದ್ದಲಿ ಪೂಜೆ

ದಾವಣಗೆರೆ, ಫೆ.13- ನಗರ ಪಾಲಿಕೆ 39ನೇ ವಾರ್ಡಿನಲ್ಲಿ  ಒಳಾಂಗಣ ಮಹಿಳಾ ವ್ಯಾಯಾಮ ಶಾಲೆ ನಿರ್ಮಾಣಕ್ಕೆ ಶಾಸಕ ಎಸ್.ಎ.ರವೀಂದ್ರನಾಥ್, ಮಹಾಪೌರ ಎಸ್.ಟಿ.ವೀರೇಶ್, 39ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಗೀತಾ ದಿಳ್ಯೆಪ್ಪ ಅವರುಗಳು ಭೂಮಿ ಪೂಜೆ ಮಾಡುವುದರ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶ್ರೀಮತಿ ಗೀತಾ ದಿಳ್ಯೆಪ್ಪ, ಎಲ್.ಡಿ.ಗೋಣೆಪ್ಪ, ಉಮಾ ಪ್ರಕಾಶ್, ರೇಣುಕಾ ಶ್ರೀನಿವಾಸ್, ಪಾಲಿಕೆ ಸದಸ್ಯರುಗಳಾದ ಪ್ರಸನ್ನಕುಮಾರ್, ಗೌರಮ್ಮ ಗಿರೀಶ್, ವೀಣಾ ನಂಜಪ್ಪ, ವೀರೇಶ್, ಜಯಮ್ಮ ಗೋಪಿನಾಯ್ಕ, ಸೌಮ್ಯ ನರೇಂದ್ರಕುಮಾರ್, ಮಾಜಿ ಮಹಾಪೌರರಾದ ಕೆ.ಆರ್.ವಸಂತ್‌ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಮುಖಂಡರುಗಳಾದ ದಿಳ್ಯೆಪ್ಪ ಮಾಸ್ಟರ್, ಅಣಬೇರು ಜೀವನ್‌ಮೂರ್ತಿ, ಲೋಕಿಕೆರೆ ನಾಗರಾಜ್, ಸಹನಾ ರವಿ, ಗೋಪಿನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

error: Content is protected !!