ಬಸವಪೀಠವು ಎದ್ದು ವಸೆದು ನಾಣ್ಯವು ಹುಟ್ಟಿ ಬಸವನಾ ಮುದ್ರೆ ಮೆರೆದಾವು ಜಗ ಅವಗೆ ವಶವಾಗದಿಹುದೆ ಸರ್ವಜ್ಞ !

ದಾವಣಗೆರೆ, ಫೆ.13 – ನಗರದಲ್ಲಿ ಇಂದು ಜಗಜ್ಯೋತಿ ಬಸವೇಶ್ವರ ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮ ನವರ ಪ್ರತಿಮೆಗಳ ಸ್ಥಾಪನೆಗಾಗಿ ಭೂಮಿ ಪೂಜೆಯನ್ನು ರಾಣಿ ಚೆನ್ನಮ್ಮ ವೃತ್ತದಲ್ಲಿ ನೆರವೇರಿಸಲಾಯಿತು.

ಆದರೆ ಆ ಸಂದರ್ಭದಲ್ಲಿ ಅಪ್ಪಿ ತಪ್ಪಿಯೂ ಸಹ ಜಗಜ್ಯೋತಿ ಬಸವೇಶ್ವರರ ಹೆಸರನ್ನು ಯಾರೂ ಉಲ್ಲೇಖಿಸದೇ ಕೇವಲ ಕಿತ್ತೂರು ಚೆನ್ನಮ್ಮನವರ ಹೆಸರನ್ನು ಉಲ್ಲೇಖಿಸಿದ್ದು ಖೇದಕರ.  ಬಸವಣ್ಣನವರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಅಧಿಕಾರವನ್ನು ಕೊಟ್ಟ ಕಾರಣವೇ ಮುಂದಿನ ದಿನಗಳಲ್ಲಿ ಮಹಿಳೆಯರು  ಸಹಿತ ರಾಜ್ಯಭಾರ ಮಾಡಲು ಸಹಕಾರಿಯಾಗಿದೆ
ಎಂಬುದನ್ನು ನೆನೆಯಬೇಕು.

ಅದಲ್ಲದೇ, ಮಹಾಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಅಶ್ವಾರೋಹಿ ಪ್ರತಿಮೆ ಈಗಾಗಲೇ ಕಾಯಿಪೇಟೆಯಲ್ಲಿ ಇದ್ದು, ಮುಂದೆ ಮಹಾನಗರ ಪಾಲಿಕೆಯ ಆವರಣದಲ್ಲಿ ಕರ್ನಾಟಕ ಸರ್ಕಾರವು ಅಂಗೀಕರಿಸಿದ  ಜಗಜ್ಯೋತಿ ಬಸವಣ್ಣನವರು ವಚನಗಳನ್ನು ಬರೆಯುತ್ತಾ ಕುಳಿತಿರುವ ಪ್ರತಿಮೆಯನ್ನು ಸ್ಥಾಪಿಸಬೇಕು ಹಾಗೂ ಅದರ ಸುತ್ತಲೂ ಅವರ ಆಯ್ದ ವಚನ ಸಂದೇಶಗಳನ್ನು ಕೆತ್ತಿಸಬೇಕು. ಕಾರಣ ಅವರ ವಚನಗಳ ಮೂಲಕವೇ ಅವರು ನಮ್ಮೆಲ್ಲರ ಹೃದಯದಲ್ಲಿ ಎಲ್ಲ ಕಾಲಕ್ಕೂ ನೆಲೆಸಿದ್ದಾರೆ.

ಅದೇ ರೀತಿ ಚೆನ್ನಮ್ಮಾಜಿ ಅವರ ಪ್ರತಿಮೆ ಸುತ್ತಲೂ ಅವರ ಸಂದೇಶಗಳನ್ನು ಕೆತ್ತಿಸಬೇಕು ಎಂದು ಬಸವ ಬಳಗದ ಅಧ್ಯಕ್ಷ ಹುಚ್ಚಪ್ಪ ಮೇಷ್ಟ್ರು ಹಾಗೂ ಮಹಾಂತೇಶ ಅಗಡಿ ಅವರು ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದ್ದಾರೆ.

error: Content is protected !!