ಚೆನ್ನಮ್ಮ, ಬಸವೇಶ್ವರರ ಪುತ್ಥಳಿಗಳಿಗೆ ಶಂಕುಸ್ಥಾಪನೆ

ವಿದ್ಯಾನಗರದ ಮಹಿಳಾ ಜಿಮ್‌ಗೆ ಶಂಕುಸ್ಥಾಪನೆ

ದಾವಣಗೆರೆ, ಫೆ. 13 – ನಗರ ಪಾಲಿಕೆ ವತಿಯಿಂದ ತಲಾ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಾಣಿ ಚೆನ್ನಮ್ಮ ಹಾಗೂ ಜಗದ್ಗುರು ಬಸವೇಶ್ವರರ ಅಶ್ವಾರೂಢ ಪುತ್ಥಳಿಗಳ ಸ್ಥಾಪನೆಗೆ ಮತ್ತು ವಿದ್ಯಾನಗರದಲ್ಲಿ ಸ್ಥಾಪಿಸಲಾ ಗುವ ಮಹಿಳಾ ವ್ಯಾಯಾಮ ಶಾಲೆಗೆ ಸಂಸದ ಜಿ.ಎಂ.ಸಿದ್ದೇಶ್ವರ ಭೂಮಿ ಪೂಜೆ ನೆರವೇರಿಸಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮೂರು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸ ಲಾಯಿತು. ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಲ್.ಡಿ. ಗೋಣೆಪ್ಪ, ಗೀತಾ ದಿಳ್ಳೆಪ್ಪ, ಉಮಾ ಪ್ರಕಾಶ್, ರೇಣುಕ ಶ್ರೀನಿವಾಸ್, ಪಾಲಿಕೆ ಪ್ರತಿಪಕ್ಷದ ನಾಯಕ ಎ. ನಾಗರಾಜ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಪಾಲಿಕೆ ಸದಸ್ಯರಾದ ಬಿ.ಸೋಗಿ ಶಾಂತಕುಮಾರ್, ಜಯಮ್ಮ ಗೋಪಿನಾಯ್ಕ, ಪಂಚಮಸಾಲಿ ಸಮಾಜದ ಮುಖಂಡರಾದ ಎಂ. ದೊಡ್ಡಪ್ಪ, ಕಂಚಿಕೇರಿ ಕೊಟ್ರೇಶ್, ಬಂಕಾಪುರ ಚನ್ನಬಸಪ್ಪ, ಬದಾಮಿ ಜಯಣ್ಣ, ಶಿವಶಂಕರ್, ಅಶೋಕ್ ಗೋಪನಾಳ್, ಮಹಾಂತೇಶ್ ಒಣರೊಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಮ ಸಾಲಿ ಸಮಾಜದ ಕಾರ್ಯಾಧ್ಯಕ್ಷ ಬಿ. ಲೋಕೇಶ್, 2001ರಲ್ಲಿ ಕನ್ನಡ ಪರ ಹೋರಾ ಟಗಾರ ಬಂಕಾಪುರ ಚನ್ನಬಸಪ್ಪ, ಕೊಟ್ರೇಶ್ ಕಂಚಿಕೇರಿ ಮತ್ತಿತರರ ಮುಂದಾಳತ್ವದಲ್ಲಿ ಈ ವೃತ್ತದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನವರ ವಿಜಯೋತ್ಸವ  ಆಚರಿಸಲು ಆರಂಭಿಸಲಾಯಿತು. ಬಳಿಕ 2003ರಲ್ಲಿ ನಗರಸಭೆಯಲ್ಲಿ ಈ ವೃತ್ತಕ್ಕೆ ಚನ್ನಮ್ಮನವರ ಹೆಸರು ಇಡಬೇಕೆಂದು ಠರಾವು ಮಾಡಿ, ನಾಮಕರಣ ಮಾಡಲಾಗಿತ್ತು ಎಂದು ಹೇಳಿದರು.

2010-11ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಜಗದ್ಗುರು ಬಸವೇಶ್ವರ, ಡಾ. ಬಿ.ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಅವರ ಪುತ್ಥಳಿಗಳನ್ನು ಹಂತ ಹಂತವಾಗಿ ನಿರ್ಮಿಸಲು ಪಾಲಿಕೆ ನಿರ್ಧರಿಸಿತ್ತು. ಅದರಂತೆ ಈಗ ಕಿತ್ತೂರು ರಾಣಿ ಚೆನ್ನಮ್ಮ
ಪುತ್ಥಳಿ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

error: Content is protected !!