ರೇ ಫೌಂಡೇಶನ್‍ನಿಂದ ಸಮಾಜಮುಖಿ ಕಾರ್ಯಗಳು

ದಾವಣಗೆರೆ, ಫೆ.11- ರೇ ಫೌಂಡೇಷನ್ ವತಿಯಿಂದ ಅಧ್ಯಕ್ಷೆ ಡಾ.ಸವಿತಾಬಾಯಿ ಮಲ್ಲೇಶ್‍ನಾಯ್ಕ ಅವರ ನೇತೃತ್ವದಲ್ಲಿ ಮಾಯಕೊಂಡ ಕ್ಷೇತ್ರಗಳಲ್ಲಿನ ಬಡಜನರಿಗೆ, ಅಂಗವಿಕಲ ಮಕ್ಕಳಿಗೆ ಸ್ಟೋಲರ್, ಫುಡ್ ಪಾಕೆಟ್, ಮಾಸ್ಕ್, ಸ್ಯಾನಿಟೈಜರ್ ಮತ್ತು ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಪೆನ್‍ಗಳನ್ನು ವಿತರಿಸಲಾಯಿತು. ಅಲ್ಲದೇ ಈ ಹಿಂದೆಯೂ ತಾವು ಸರ್ಕಾರಿ ಶಾಲೆಗಳ ಮರು ನಿರ್ಮಾಣಕ್ಕೆ ಕೈಜೋಡಿಸಿದ್ದು, ಕಟ್ಟಡಕ್ಕೆ ಬಣ್ಣ ಬಳಿಸುವುದು, ವಿದ್ಯಾರ್ಥಿ ಗಳಿಗೆ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ, ನೋಟ್ ಪುಸ್ತಕ ವಿತರಣೆ ಮಾಡಿರುವುದಾಗಿ ಅಧ್ಯಕ್ಷೆ ಸವಿತಾಬಾಯಿ ತಿಳಿಸಿದ್ದಾರೆ.

error: Content is protected !!