ಕಾಮನ್ ಸರ್ವೀಸ್ ಸೆಂಟರ್ ಪ್ರಾರಂಭ

ದಾವಣಗೆರೆ, ಫೆ.11- ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪಕ್ಕದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಿಜಿಟಲ್ ಸೇವಾ ಕಾಮನ್ ಸರ್ವೀಸ್ ಸೆಂಟರ್ ಪ್ರಾರಂಭಿಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್‌ ಮಾತನಾಡಿ, ಈ ವರ್ಷ ಡಿಜಿಟಲ್ ಸೇವಾ ಕಾಮನ್ ಸರ್ವೀಸ್ ಸೆಂಟರ್ ಹೊಸದಾಗಿ ಪ್ರಾರಂಭಿಸಲಾಗಿದ್ದು, ದಾವಣ ಗೆರೆ ಜಿಲ್ಲೆಯಲ್ಲಿ 248 ಸೆಂಟರ್‌ಗಳನ್ನು ಆರಂಭಿಸ ಲಾಗಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಗಳಾಗಬೇಕೆಂಬುದೇ ಇದರ ಉದ್ದೇಶ. ಈ ಡಿಜಿಟಲ್ ಸೇವಾ ಕಾಮನ್ ಸರ್ವೀಸ್ ಸೆಂಟರ್‌ನಲ್ಲಿ ಆಧಾರ್ ಕಾರ್ಡ್ ಸೇರಿ 700 ಸೇವೆಗ ಳಿಗೆ  ಸರ್ಕಾರ ನಿಗದಿಪಡಿಸಿದ ಮೊತ್ತವನ್ನೇ ತೆಗೆದು ಕೊಳ್ಳಲಾಗುವು ದೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಬಿ. ಕರಿಬಸಪ್ಪ, ತಾ.ಪಂ. ಮಾಜಿ ಸದಸ್ಯರಾದ ಸಂಗನಗೌಡ್ರು, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ. ವಿರುಪಾಕ್ಷಪ್ಪ, ದಾವಣಗೆರೆ ಅಡಿಕೆ ಸೊಸೈಟಿ ನಿರ್ದೇಶಕ ಮಠದ ಬಸವರಾಜಯ್ಯ, ತಾಲ್ಲೂಕು ಕಸಾಪ ನಿರ್ದೇಶಕ ಎಂ.ಷಡಕ್ಷರಪ್ಪ, ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಗೋಪಾಲರಾವ್, ಉಪಾಧ್ಯಕ್ಷರಾದ ಶ್ರೀಮತಿ ರಮಾ ರಂಗರಾವ್ ಪ್ರಬಂಧಕರಾದ ಗೌರಿ, ಮೇಲ್ವಿಚಾರ ಕರಾದ ಎಂ.ರೂಪಾ, ಒಕ್ಕೂಟದ ಪದಾಧಿಕಾರಿಗಳಾದ ಶೃತಿ, ಸಿದ್ದೇಶ್, ವೀಣಾ ಉಪಸ್ಥಿತರಿದ್ದರು.

error: Content is protected !!