ಪಾಕಿಸ್ತಾನದ ಪರ ಘೋಷಣೆ ಮಾಡಿಲ್ಲ

ಹಿಜಾಬ್‌ಗೆ ಆಕ್ಷೇಪಿಸಿ ಕೋಮು ದ್ವೇಷ ಸೃಷ್ಟಿ : ಹರಿಹರ ಮುಸ್ಲಿಂ ಸಮಾಜ ಒಕ್ಕೂಟದ ಹೇಳಿಕೆ

ಹರಿಹರ, ಫೆ. 10 – ನಗರದ ಪೊಲೀಸ್ ಠಾಣೆ ಎದುರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಮಾಡಿರುವುದಾಗಿ ಕೆಲವರು ಮಾಡಿರುವ ಆರೋಪ ಆಧಾರ ರಹಿತ ಎಂದಿರುವ ಹರಿಹರ ಮುಸ್ಲಿಂ ಸಮಾಜ ಒಕ್ಕೂಟ, ಹಿಜಾಬ್ ಧರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೋಮು ದ್ವೇಷ ಸೃಷ್ಟಿಸಲಾಗುತ್ತಿದೆ ಎಂದು ಆಕ್ಷೇಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಒಕ್ಕೂಟದ ಅಧ್ಯಕ್ಷ ಹಾಜಿ ಅಲಿ ಖಾನ್, ನಗರದ ಶಾಂತಿ ಭಂಗಕ್ಕೆ ಕಾರಣವಾಗಿರುವ ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮುಸ್ಲಿಂ ಯುವಕರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಮಾಡಿದ್ದಾರೆಂದು ಕೆಲವು ಕೋಮು ವಾದಿ ಗಳು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಡಿಯೋಗಳನ್ನು ಪ್ರಸಾರ ಮಾಡಿದ್ದಾರೆ. ಇದನ್ನು ಖಂಡಿಸುವುದಾಗಿ ಹೇಳಿರುವ ಖಾನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿಷಯದಲ್ಲಿ ಗಲಭೆ ಸೃಷ್ಟಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಮಾಜಿ ನಗರಸಭೆ ಸದಸ್ಯ ಏಜಾಜ್ ಆಹ್ಮದ್, ಜೆಡಿಎಸ್‌ನ ಆಸೀಫ್ ಮಾತನಾಡಿದರು.

ನಗರಸಭೆ ಮಾಜಿ ಸದಸ್ಯ ಮಹಮ್ಮದ್ ಸಿಗ್ಬತ್ ಉಲ್ಲಾ ಮಾತನಾಡಿ, ಬಿಜೆಪಿ ಸರ್ಕಾರ ಆಡಳಿತ ಮಾಡುವಲ್ಲಿ ವಿಫಲವಾದ ಕಾರಣ ಕೋಮು ವಿಷ ಬೀಜ ಬಿತ್ತುವ ಮೂಲಕ ಚುನಾವಣೆಯಲ್ಲಿ ಲಾಭವನ್ನು ಪಡೆಯುವ ಹುನ್ನಾರ ಮಾಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಆರ್.ಸಿ. ಜಾವೇದ್, ದಾದಾಖಲಂದರ್, ಅಲ್ತಾಫ್, ಸೈಯದ್ ಅಲೀಂ, ಮುಖಂಡರಾದ ಸೈಯದ್ ಆಸೀಫ್ ಜುನೇದಿ, ಮದ್ದಿ ಮನಸ್ಸೂರು, ದಾದಾಪೀರ್ ಭಾನುವಳ್ಳಿ, ಆಸೀಫ್ ಕನವಳ್ಳಿ, ಹಬೀಬ್, ಸಿಕಂದರ್, ರೆಮಮತ್ ಉಲ್ಲಾ ರಹೆಮಾನ್, ಇಲಿಯಾಸ್ ಆಹ್ಮದ್, ಮತ್ತಿತರರು ಉಪಸ್ಥಿತರಿದ್ದರು.

error: Content is protected !!