ಒಗ್ಗಟ್ಟಿನಿಂದ ಉತ್ತಮ ಕೆಲಸ ಮಾಡಿದರೆ ಬಡವರ ಏಳಿಗೆ

ಹರಿಹರ : ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಬಸವರಾಜ್ ಇಂಡಿ

ಹರಿಹರ, ಜ.6- ಕುರುಹಿನಶೆಟ್ಟಿ ಸಮಾಜ ದಲ್ಲಿ ಸಣ್ಣ ಪುಟ್ಟ ಗೊಂದಲ ಉಂಟಾದರೂ ಅದಕ್ಕೆ ಹೆಚ್ಚಿನ ಮಹತ್ವವನ್ನು ಕೊಡದೇ ಒಳ್ಳೆಯ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಬಸವರಾಜ್ ಇಂಡಿ ಹೇಳಿದರು.

ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ 18ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಗ್ಗಟ್ಟಿನಿಂದ ಉತ್ತಮ ಕೆಲಸಗಳಿಗೆ ಆದ್ಯತೆ ನೀಡಿದಾಗ ಸಮಾಜದಲ್ಲಿನ ಬಡವರ ಏಳಿಗೆಗೆ ಅನುಕೂಲವಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಭಂಡಾರಿ ಮಾತನಾಡಿ, ಈ ಹಿಂದೆ ನಮ್ಮ ಅಧ್ಯಕ್ಷತೆ ಅವಧಿಯಲ್ಲಿ ಶಾಸಕರ ಅನುದಾನದಡಿ 10 ಲಕ್ಷ ರೂ. ಅನುದಾನಕ್ಕಾಗಿ ಶಾಸಕ ಎಸ್. ರಾಮಪ್ಪನವರಿಗೆ ಮನವಿ ಸಲ್ಲಿಸಲಾಗಿತ್ತು. ಮುಂದಿನ ತಿಂಗಳು 5 ಲಕ್ಷ ರೂ. ಅನುದಾನ ಕೊಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.

ವೇದಿಕೆಯಲ್ಲಿ ದೇವೇಂದ್ರಪ್ಪ ಮ್ಯಾಳ, ಅಣ್ಣಪ್ಪ ಶ್ಯಾವಿ, ಜಗನ್ನಾಥ್ ಬುಟ್ಟಾ, ಶ್ರೀನಿವಾಸ್ ಇಂಡಿ, ನಾಗರಾಜ್ ಬುಟ್ಟಾ, ಕೃಷ್ಣಮೂರ್ತಿ ಇಂಡಿ, ಚಂದ್ರಪ್ಪ ಭಂಡಾರಿ, ರಾಜು ಐರಣಿ, ಮಲ್ಲೇಶಪ್ಪ ಭಂಡಾರಿ, ಭಾರತಿ ಶ್ಯಾವಿ, ಉಮಾರಾಣಿ, ರೇಖಾ ಶ್ಯಾವಿ, ವಿದ್ಯಾ ರಾಣಿ ಗದ್ದದ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿ, ಚಿನ್ನದ ಪದಕವನ್ನು ಗೆದ್ದ ಸಮಾಜದ ಚಂದ್ರಶೇಖರ್ ಸುಜಾತಾ ಅಮ್ರದ್ ಅವರ ಪುತ್ರಿ ಪ್ರಿಯಾಂಕಾ ಅಮ್ರದ್ ಸನ್ಮಾನಿಸಿ ಗೌರವಿಸಲಾಯಿತು.

ಸ್ನೇಹ ಬಳ್ಳಾರಿ ಪ್ರಾರ್ಥಿಸಿದರು. ಚಂದ್ರಶೇಖರ ಅಮ್ರದ್ ನಿರೂಪಿಸಿದರು. ಡಿ.ವಿ.ಜಿ. ನಿಂಗರಾಜ್ ವಂದಿಸಿದರು.

error: Content is protected !!