ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಬಾಮ ಹಿತನುಡಿ

ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ತರಬೇತಿ

ದಾವಣಗೆರೆ, ಫೆ. 4- ಮಹಾನಗರ ಪಾಲಿಕೆಯ 21ನೇ ವಾರ್ಡ್‌ನ ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಾಡಾಗಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಪೋಷಕರ ತರಬೇತಿ ಕಾರ್ಯಾಗಾರವನ್ನು ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಾ.ಮ. ಬಸವರಾಜಯ್ಯ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾವು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಕೇವಲ ಎರಡು ಕೊಠಡಿಗಳ ಮಾತ್ರ ಇದ್ದವು, ಇಂದು ನಾವು ಸುಸಜ್ಜಿತ ಶಾಲೆಗಾಗಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ತಯಾರಿದ್ದು, ತಾವುಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಪೋಷಕರಿಗೆ ಕರೆ ನೀಡಿದರು.

ಯುವ ಕಾಂಗ್ರೆಸ್ ಮುಖಂಡ ಕೆ.ಎಲ್.ಹರೀಶ್ ಬಸಾಪುರ ಮಾತನಾಡಿ, ಶಾಲೆಯಲ್ಲಿ 288 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಬೇಕು. ಅಕ್ಕಪಕ್ಕದ ಮನೆಯ ಮಕ್ಕಳು ಶಾಲೆಗೆ ಹೋಗದಿದ್ದರೆ ಅಂತಹ ಪೋಷಕರಿಗೆ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದರು.

ಸ್ಮಾರ್ಟ್ ಸಿಟಿ ಸಹಾಯಕ ಇಂಜಿನಿಯರ್ ವೀರೇಶ್ ಮಾತನಾಡಿದರು. ಶಿಕ್ಷಕಿ ಶ್ರೀಮತಿ ಸ್ಮಿತಾ ಪ್ರಾರ್ಥಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಶಶಿಕಲಾ ನಿರೂಪಿಸಿದರು. ಪ್ರಭಾರಿ ಮು.ಶಿ. ಸಂತೋಷ್ ಕುಮಾರ್  ಸ್ವಾಗತಿಸಿದರು.

ಸಿ.ಆರ್.ಪಿ ಶೌಕತ್ ಆಲಿ, ಗ್ರಾಮದ ಮುಖಂಡರಾದ ಸಿ.ಮಹೇಶ್ವರಪ್ಪ, ಎಂ.ಎಸ್. ಕೊಟ್ರಯ್ಯ, ಉಪಾಧ್ಯಕ್ಷರಾದ ಶ್ರೀಮತಿ ನಾಗವೇಣಿ ಸದಸ್ಯರುಗಳಾದ ರಮೇಶ್, ದೇವೀರಮ್ಮ, ಸುನೀತ, ಮಂಜುಳಾ, ಸುಮಿತ್ರ, ಶಕುಂತಲಾ, ಪುಷ್ಪ, ಭವ್ಯ, ಪೋಷಕರಾದ ಕರಿಬಸಪ್ಪ, ಬಾಳಪ್ಪ, ರೂಪ, ನಿರ್ಮಲ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!