ದಾವಣಗೆರೆ, ಫೆ. 3- ಕದಳಿ ಮಹಿಳಾ ವೇದಿಕೆ ಯಿಂದ ವಾಟ್ಸಾಪ್ ಮೂಲಕ ಜೇಡರ ದಾಸಿಮಯ್ಯ ಜಯಂತಿ, ಗಣರಾಜ್ಯೋತ್ಸವ ಆಚರಣೆ ನಡೆಯಿತು.
ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ಕುಸುಮಾ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕದಳಿ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಸಾವಿತ್ರಮ್ಮ ಸಿದ್ದಪ್ಪ, ಅ.ಭಾ.ಶ.ಸಾ.ಪರಿಷತ್ ಜಿಲ್ಲಾಧ್ಯಕ್ಷ ಕೆ. ಬಿ.ಪರಮೇಶ್ವರಪ್ಪ, ಕದಳಿ ಮಹಿಳಾ ವೇದಿಕೆ ಕೇಂದ್ರ ಸಮಿತಿ (ಬೆಂಗಳೂರು) ಉಪ ಸಂಚಾಲಕರಾದ ಪ್ರಮೀಳಾ ನಟರಾಜ್, ಕದಳಿ ಮಹಿಳಾ ವೇದಿಕೆ ಸ್ಥಾಪಕ ಅಧ್ಯಕ್ಷೆ ಯಶಾ ದಿನೇಶ್ ಉಪಸ್ಥಿತರಿದ್ದರು.
ಎಂ.ಕೆ.ಬಕ್ಕಪ್ಪ `ವಚನಕಾರರ ವೈಚಾರಿಕತೆ ಮತ್ತು ಮೌಢ್ಯ ವಿರೋಧಿ ನಿಲುವು’, ಉಪನ್ಯಾಸಕ ರಾದ ಜಿ.ಸಿ. ನೀಲಾಂಬಿಕಾ `ಇಂದಿನ ಯುವ ಜನರ ಭವಿಷ್ಯ ನಿರ್ಮಾಣ ವಚನ ಸಾಹಿತ್ಯದ ಅರಿ ವಿನ ಪಾತ್ರ’ ವಿಷಯವಾಗಿ ಉಪನ್ಯಾಸ ನೀಡಿದರು.
ಗಣರಾಜ್ಯೋತ್ಸವದ ಅಂಗವಾಗಿ ಕದಳಿ ಸದಸ್ಯರಿಗೆ, ಅವರ ಮಕ್ಕಳು, ಮೊಮ್ಮಕ್ಕಳಿಗೆ ಏರ್ಪಡಿಸಿದ್ದ ದೇಶಭಕ್ತಿ ಗೀತಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ಕದಳಿ ಮಹಿಳಾ ವೇದಿಕೆ ಸ್ಥಾಪಕ ಅಧ್ಯಕ್ಷೆ ಯಶಾ ದಿನೇಶ್ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಪೂರ್ಣಿಮಾ ಮರಬನಹಳ್ಳಿ, ವನಜಾ ಚಂದ್ರಶೇಖರ್, ವೀಣಾ ಜೆ. ಭವಾನಿ ಶಂಭುಲಿಂಗಪ್ಪ ಮತ್ತು ಚಿನ್ನ ಮಲ್ಲಿಕಾರ್ಜುನ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹು ಮಾನ ಪಡೆದಿದ್ದಾರೆ.
ಮಕ್ಕಳ ವಿಭಾಗದಲ್ಲಿ ಜೆ. ಪ್ರಸಿದ್ಧಿ, ಶ್ರಾವ್ಯ, ಎಲ್.ವಿ. ಸನ್ನಿಧಿ, ನಯನಿಕ ಬಹುಮಾನ ಪಡೆದಿರುತ್ತಾರೆ. ಚಂದ್ರಿಕಾ ಮಂಜುನಾಥ್ ಕಾರ್ಯಕ್ರಮ ನಿರೂಪಿ ಸಿದರು. ವಾಣಿರಾಜ್ ಸ್ವಾಗತಿಸಿದರು. ನಿರ್ಮಲಾ ಶಿವಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ವಿಜಯಲಕ್ಷ್ಮಿ ಬಸವರಾಜ್ ವಂದಿಸಿದರು.