ಗೊಲ್ಲ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ರಕ್ತದ ಪತ್ರ ಚಳುವಳಿ

ದಾವಣಗೆರೆ, ಫೆ.3- ಗೊಲ್ಲ (ಯಾದವ) ಸಮುದಾಯದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ, ನಾಡಿದ್ದು ದಿನಾಂಕ 5 ರಂದು ನಗರದ ಜಯದೇವ ವೃತ್ತದಲ್ಲಿ ಬೆಳಿಗ್ಗೆ 12 ಕ್ಕೆ ಗೊಲ್ಲ ಸಮುದಾಯದ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಕ್ತ ಪತ್ರ ಚಳುವಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಯಾದವ ಮಹಾಸಭಾ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಅಧ್ಯಕ್ಷತೆ ವಹಿಸುವರು ಎಂದು ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಗೊಲ್ಲ ಸಮಾಜವನ್ನು ಎಸ್ಟಿಗೆ ಸೇರಿಸುವಂತೆ ರಾಜ್ಯ ಸಚಿವ ಸಂಪುಟ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು, ತಕ್ಷಣ ಕೇಂದ್ರ ಸರ್ಕಾರ ಗೊಲ್ಲ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸಬೇಕು ಎಂದು ಬಿಜೆಪಿ ವರಿಷ್ಠರಲ್ಲಿ ಒತ್ತಾಯಿಸಲಾಗುವುದು.  `ರಕ್ತ ಪತ್ರ’ ಚಳುವಳಿ ವಿಚಾರವನ್ನು ನಿರ್ಲಕ್ಷ್ಯ ಮಾಡದೇ ಗಂಭೀರವಾಗಿ ಪರಿಗಣಿಸಿ ಸಚಿವ ಸ್ಥಾನ ನೀಡಲೇಬೇಕು. ಇದು ಹೋರಾಟವಲ್ಲ ನಮ್ಮ ಹಕ್ಕು ಕೇಳುತ್ತಿದ್ದೇವೆ ಎಂದು  ಬಾಡದ ಆನಂದರಾಜ್ ತಿಳಿಸಿದ್ದಾರೆ.

error: Content is protected !!