ಮಲೇಬೆನ್ನೂರಿನಲ್ಲಿ ಮಡಿವಾಳ ಮಾಚಿದೇವರ ಜಯಂತಿ

ಮಲೇಬೆನ್ನೂರು, ಫೆ. 2- ಇಲ್ಲಿನ ಪುರಸಭೆ ಮತ್ತು ನಾಡ ಕಚೇರಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು.

ಉಪ ತಹಶೀಲ್ದಾರ್ ಆರ್. ರವಿ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ ಅವರು ಮಾಚಿ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.

ಈ ವೇಳೆ ಪುರಸಭೆ ಸದಸ್ಯ ಸಾಬೀರ್ ಜಯಸಿಂಹ ಮಾತನಾಡಿ, ವಚನಗಳನ್ನು ಸಂಗ್ರಹ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಡಿವಾಳ ಮಾಚಿದೇವರು ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಗಣಾಚಾರಿಯಾಗಿ ಹೋರಾಟ ಮಾಡಿದ್ದಾರೆಂದು ಸ್ಮರಿಸಿದರು.

ಪುರಸಭಾ ಸದಸ್ಯರಾದ ಕೆ.ಜಿ. ಲೋಕೇಶ್, ಗೌಡ್ರು ಮಂಜಣ್ಣ, ಬಿ. ಮಂಜುನಾಥ್, ಮಹಮದ್ ನಯಾಜ್, ದಾದಾಪೀರ್, ಮಾಜೀದ್, ಅನ್ವರ್ ಸಾಬ್ ನಾಮಿನಿ ಸದಸ್ಯರಾದ ಎ.ಕೆ. ಲೋಕೇಶ್, ಮಡಿವಾಳ ಸಮಾಜದ ಮುಖಂಡರಾದ ಎಂ.ಆರ್. ಮಹಾದೇವಪ್ಪ, ತಾಲ್ಲೂಕು ಕುರುಬ ಸಮಾಜದ ಕಾರ್ಯದರ್ಶಿ ಕೆ.ಪಿ. ಗಂಗಾಧರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್, ಪುರಸಭೆ ಮಾಜಿ ಸದಸ್ಯ ಬಿ. ಸುರೇಶ್, ವಿಶೇಷ ಚೇತನ ಸಂಘದ ಅಧ್ಯಕ್ಷ ಪಿ. ಗಂಗಾಧರ್ ಮತ್ತಿತರರು ಭಾಗವಹಿಸಿದ್ದರು.

error: Content is protected !!