ಮಾಚಿದೇವರ ಆದರ್ಶ ಎಲ್ಲರಿಗೂ ಅನ್ವಯ

ಕಲ್ಯಾಣ ರಾಜ್ಯದಲ್ಲಿ ಜಗಜ್ಯೋತಿ ಬಸವೇಶ್ವರ ಅವರ ಒಡನಾಡಿಗಳಾಗಿದ್ದ ಮಾಚಿದೇವರು ಕಾಯಕ ನಿಷ್ಠೆಯೊಂದಿಗೆ ವಚನಗಳನ್ನು ನುಡಿಯುತ್ತಾ ಸಮಾಜದ ಕಂದಾಚಾರದ ವಿರುದ್ಧ ಸಮರ ಸಾರಿದ್ದರು.

– ಸಂತೋಷ್ ಕುಮಾರ್, ತಹಶೀಲ್ದಾರ್, ಜಗಳೂರು.

ಜಗಳೂರು, ಫೆ.1- ಕಾಯಕದ ಮೂಲಕ ಬದುಕು ಕಟ್ಟಿಕೊಂಡು ಸಾಮಾಜಿಕ ಕ್ರಾಂತಿಗೆ ಕಾರಣರಾದ ಮಡಿವಾಳ ಮಾಚಿದೇವ ಅವರ ಆದರ್ಶಗಳು ಎಲ್ಲಾ ಸಮಾಜಗಳಿಗೂ ಅನ್ವಯವಾಗುತ್ತವೆ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್  ಹೇಳಿದರು.

ಪಟ್ಟಣದ  ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತ ಹಾಗೂ ಮಡಿವಾಳ ಸಮಾ ಜದ ಸಹಯೋಗದಲ್ಲಿ ಇಂದು ಏರ್ಪಾಡಾಗಿದ್ದ ಮಡಿವಾಳ ಮಾಚಿದೇವ ಜಯಂತ್ಯೋತ್ಸವದ ಸರಳ ಆಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದಂತಹ ವಚನಕಾರರಲೊಬ್ಬರಾದ ಮಾಚಿದೇವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.      

ಸಮಾಜದ  ಪ್ರಧಾನ   ಕಾರ್ಯದರ್ಶಿ ಹರೀಶ್ ಮಾತನಾಡಿ, ಕಾಯಕ ನಿಷ್ಠೆಗೆ ಹೆಸರಾದ ಮಡಿವಾಳ ಮಾಚಿದೇವ ಶರಣರು
ಸಮಾಜದ ಕಳಶದಂತೆ ಇದ್ದು ಕೇವಲ ಬಟ್ಟೆಯ ಕೊಳೆಯನ್ನ ಲ್ಲದೇ ಅಸಮಾನತೆಯ ಮನಸ್ಸುಗಳ ಕೊಳೆಯನ್ನು ವಚನಗಳ ಮೂಲಕ ತೊಳೆದು  ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಲು ಬಸವಾದಿ ಶರಣರೊಂದಿಗೆ ಹೆಜ್ಜೆ ಹಾಕಿದರು ಎಂದರು. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಅನ್ನಪೂರ್ಣ ವರದಿ ಪ್ರಕಾರ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಇದೇ ವೇಳೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.    

ಈ ಸಂದರ್ಭದಲ್ಲಿ ಲೋಕೊಪಯೋಗಿ ಎಇಇ ರುದ್ರಪ್ಪ, ಉಪ ತಹಶೀಲ್ದಾರ್ ರಾಮಚಂದ್ರಪ್ಪ, ರಾಜಸ್ವ ನಿರೀಕ್ಷಕ ಕುಬೇರನಾಯ್ಕ, ಮಡಿವಾಳ ಸಮಾಜದ ಅಧ್ಯಕ್ಷ ರೇವಣಸಿದ್ದಪ್ಪ, ಖಜಾಂಚಿ ಹರೀಶ್, ತಿಪ್ಪೇಸ್ವಾಮಿ, ರವಿಕುಮಾರ್, ಚಂದ್ರಪ್ಪ, ಸಂಜಯ್ ಸೇರಿದಂತೆ ಮಡಿವಾಳ ಸಮಾಜದ ಹಲವು‌ ಮುಖಂಡರು ಕಚೇರಿ ಸಿಬ್ಬಂದಿಗಳು ಇದ್ದರು.

error: Content is protected !!