ಮಧ್ಯಮ ವರ್ಗದ ವಿರೋಧಿ ಬಜೆಟ್

ಮಧ್ಯಮ ವರ್ಗದ ವಿರೋಧಿ ಬಜೆಟ್ - Janathavaniದಾವಣಗೆರೆ,ಫೆ.1- ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಸುಮಾರು 39.45 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಧ್ಯಮ ವರ್ಗದ ವಿರೋಧಿ ಬಜೆಟ್ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಬಜೆಟ್​ ಹೆಸರಲ್ಲಿ ಮಾಡಲಾದ ಘೋಷಣೆಯಲ್ಲಿ ವೇತನ ವರ್ಗಕ್ಕೆ, ಮಧ್ಯಮ ವರ್ಗಕ್ಕೆ, ಬಡವರು ಮತ್ತು ಸೌಲಭ್ಯ ವಂಚಿತರಿಗೆ, ಯುವಕರಿಗೆ, ರೈತರಿಗೆ, ಎಂಎಸ್​ಎಂಇ ಗಳಿಗೆ ಏನೂ ಇಲ್ಲ ಎಂದು  ಹೇಳಿದ್ದಾರೆ. ಮೋದಿ  ಸರ್ಕಾರ ಝೀರೋ ಸಮ್‌ ಬಜೆಟ್‌  ಎಂದು ಹೇಳಿ, ಅದರಡಿಯಲ್ಲಿ ವೇತನ ವರ್ಗದವರಿಗೆ ಏನೂ ಇಲ್ಲ. ಮಧ್ಯಮ ವರ್ಗ, ಬಡವರು ಮತ್ತು ಸೌಕರ್ಯ ವಂಚಿತರು, ಯುವಜನರು, ರೈತರು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಏನೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

`ರೈತರ ಆದಾಯವನ್ನು ದ್ವಿಗುಣಗೊಳಿಸುವುದಿಲ್ಲ, ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ, ಹಣದುಬ್ಬರ ಬೆಲೆ ಇಳಿಕೆಯಿಲ್ಲ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಯಾವುದೇ ಕ್ರಮವೂ ಇಲ್ಲ, ಯುವಕರಿಗೆ ಉದ್ಯೋಗ ಅವಕಾಶ ನೀಡಲಾಗಿಲ್ಲ. ಈ ಬಾರಿಯೂ ಹಳೇ ಸುಳ್ಳುಗಳನ್ನೇ ಹೇಳಲಾಗಿದೆ ಮತ್ತು ಸಬ್ಸಿಡಿ ಮೇಲೆ ಪ್ರಹಾರ ನಡೆಸಲಾಗಿದೆ. ಇದು ಮೋದಿ ಸರ್ಕಾರದ ಈ ಬಾರಿಯ ಬಜೆಟ್ ಸಾರಾಂಶ ಎಂದು ವ್ಯಂಗ್ಯವಾಡಿದ್ದಾರೆ.

error: Content is protected !!