ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಸರಳ ಆಚರಣೆಗೆ ಭಕ್ತರ ಒಲವು

ಕೊಟ್ಟೂರು, ಜ.31-  ಕೋವಿಡ್ ನಿಯಮವನ್ನು ಚಾಚೂ ತಪ್ಪದೇ ಪಾಲಿಸುತ್ತಾ ಕನಿಷ್ಠ ಭಕ್ತರೊಂದಿಗೆ ಅತ್ಯಂತ ಸರಳವಾಗಿ ಫೆಬ್ರವರಿ 25 ರಂದು ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ಆಚರಿಸಲು ಇಂದು ನಡೆದ ಸಭೆಯಲ್ಲಿ ಭಕ್ತರು ಒಪ್ಪಿಗೆ ಸೂಚಿಸಿದರು.

ತಾಲ್ಲೂಕು ಕಚೇರಿಯ ಮಹಾತ್ಮಗಾಂಧಿ ಸಭಾಂಗಣದಲ್ಲಿ   ತಹಸೀಲ್ದಾರ್ ಎಂ.ಕುಮಾರಸ್ವಾಮಿ ಅವರು ಇಂದು ಕರೆದಿದ್ದ ಸಭೆಯಲ್ಲಿ ಸಾರ್ವಜನಿಕರು ಸರಳ ರಥೋತ್ಸವಕ್ಕೆ ಒಕ್ಕೊರಲಿನಿಂದ ಸಮ್ಮತಿಸಿದರು.

ಜಿ.ಪಂ. ಮಾಜಿ ಸದಸ್ಯ ಹರ್ಷವರ್ಧನ, ರಾಜ್ಯ ಬೀಜ ನಿಗಮದ ನಿರ್ದೇಶಕ ರಾಜೇಂದ್ರ ಪ್ರಸಾದ್, ಜೆಡಿಎಸ್ ಮುಖಂಡ ಡಾ. ತಿಪ್ಪೇಸ್ವಾಮಿ, ವೆಂಕಟೇಶ, ದೇವಸ್ಥಾನ ಧರ್ಮಕರ್ತ ಗಂಗಾಧರಯ್ಯ, ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭರಮಪ್ಪ, ಡಿಎಸ್ಎಸ್ ಮುಖಂಡ ದುರುಗೇಶ್, ಮರಿಸ್ವಾಮಿ ಇನ್ನೂ ಮುಂತಾದವರು ಮಾತನಾಡಿದರು. 

ತಹಸೀಲ್ದಾರ್ ಎಂ.ಕುಮಾರಸ್ವಾಮಿ, ತಮ್ಮೆಲ್ಲರ ಅಭಿಪ್ರಾಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ಲಿಖಿತ ಮೂಲಕ ತರಲಾಗುವುದು. ರಥೋತ್ಸವಕ್ಕೆ ಇನ್ನೂ 25 ದಿವಸ ಇದೆ. ಈಗಾಗಲೇ ಕೊರೊನಾ ತಗ್ಗಿದ್ದು, ರಥೋತ್ಸವಕ್ಕೆ ಯಾವುದೇ ವಿಘ್ನ ಬಾರದಿರಲಿ ಎಂದು ನಾವು ಸಹ ಪ್ರಾರ್ಥನೆ ಮಾಡುತ್ತೇವೆ ಎಂದರು.

ವೇದಿಕೆಯಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ, ಸುಧಾಕರ ಪಾಟೀಲ್ ಇದ್ದರು. ಸಭೆಯಲ್ಲಿ ಉಪಸ್ಥಿತರಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಸೋಮಶೇಖರ್ ರೆಡ್ಡಿ ಮಾತನಾಡಿದರು.

ಬಿಜೆಪಿ ಮುಖಂಡ ಬಿ.ಆರ್. ವಿಕ್ರಂ, ಡಿಎಸ್‌ಎಸ್ ಮುಖಂಡ ಮರಿಸ್ವಾಮಿ ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!