ಪೌರ ಕಾರ್ಮಿಕರ ಸೇವೆ ಶ್ಲ್ಯಾಘನೀಯ

ಹರಪನಹಳ್ಳಿ : ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ

ಹರಪನಹಳ್ಳಿ, ಜ.30- ಪಟ್ಟಣವನ್ನು ನಿತ್ಯ ಸ್ವಚ್ಛಗೊಳಿಸುವ ಪೌರ ಕಾರ್ಮಿಕ ಕಾರ್ಯ ಶ್ಲಾಘನೀಯವಾಗಿದ್ದು,  ಅಂತಹ ಕಾರ್ಮಿಕರನ್ನು ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಪುರಸಭಾ ಕಾರ್ಯಾಲಯ ಹರಪನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಮತ್ತು ಮಹಾತ್ಮ ಗಾಂಧಿಜೀ ಅವರ ಹುತಾತ್ಮರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಉಭಯ ನ್ಯಾಯಾಲಯದ ನ್ಯಾಯಾಧೀಶರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದರು.

ದೈಹಿಕವಾಗಿ, ನೈತಿಕವಾಗಿ ಸ್ವಚ್ಛತೆ ಪಡಿಸುವು ದಕ್ಕಿಂತ ಮಾನಸಿಕವಾಗಿ  ನಾವು ಸ್ವಚ್ಛತೆಯ ಮಾರ್ಗವನ್ನು ಅರಿತು ಕೊಳ್ಳಬೇಕು. ಸ್ವಚ್ಛತೆ ಎನ್ನುವುದು ಗಾಂಧೀಜಿಯವರ ಕನಸು. ಅದನ್ನು ನನಸಾಗಿಸಲು ದೇಶದ ಪ್ರಜೆಗಳು ಕೈ ಜೊಡಿಸಿದಾಗ ಮಾತ್ರ ಇಂತಹ ಯೋಜನೆಗಳನ್ನು ಜಾರಿಯಾಗು ವುದಕ್ಕೆ ಸಾಧ್ಯವಾಗುತ್ತದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಇಂತಹ ಯೋಜನೆಗಳನ್ನು ಸಾರ್ವ ಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ.  ಮಾತನಾಡಿ,  ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಹ, ಇನ್ನೂ  ಸರಿಯಾದ ಗಾಳಿ ಮನುಷ್ಯರಿಗೆ ಸಿಗುತ್ತಿಲ್ಲ ಪರಿಸರ ಉಳಿಸಿದರೆ ಮಾತ್ರ ಶುದ್ಧ  ಗಾಳಿ ಸಿಗುವುದಕ್ಕೆ ಸಾಧ್ಯವಾಗುತ್ತದೆ. ಮಹಾತ್ಮ ಗಾಂಧಿಜೀಯವರು ದೇಶವನ್ನು ರಾಮರಾಜ್ಯವನ್ನಾಗಿ ಮಾಡಬೇಕು ಎನ್ನುವ ಕನಸು  ಕಂಡಿದ್ದರು. ಇಂತಹ ಯೋಜನೆಗಳನ್ನು  ಕಾರ್ಯ ರೂಪಕ್ಕೆ ತರುವುದರ ಜೊತೆಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಗಾಂಧಿಜೀ ಕನಸು ನನಸಾಗುತ್ತದೆ ಎಂದರು. 

ಪುರಸಭಾ ಹಿರಿಯ ಆರೋಗ್ಯ ನಿರಿಕ್ಷಕ ಮಂಜುನಾಥ್ ಮಾತನಾಡಿ, ಸಾರ್ವಜನಿಕರು ಕೈ ಜೋಡಿಸಿದರೆ ಮಾತ್ರ ಇಂತಹ ಮಹನೀಯರು ಕಂಡ ಕನಸುಗಳನ್ನು ನನಸು ಮಾಡಲು ಸಾಧ್ಯವಾಗುತ್ತದೆ ಎಂದರು.

ಕಿರಿಯ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳೆಗೇರಿ, ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ. ವಾಸುದೇವ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ,  ನ್ಯಾಯಾಲಯದ ಸಿಬ್ಬಂದಿ ಗಳಾದ ಮಂಜುನಾಥ್  ಜನವಾಡೆ, ಜಿ.ಎನ್.  ಶಿವಾನಂದ, ಉಜ್ವಲ್ ಕುಮಾರ್, ಮುರುಳಿ, ಮೇಘರಾಜ್, ಗುಡೆಕೋಟೆ ನಾಗರಾಜ್,  ಕಡಕೋಳದ ರೇವಣಸಿದ್ದಪ್ಪ, ಅರುಣ್ ಕುಮಾರ್, ಬಿ. ಬಸವರಾಜ್, ಕೋಟ್ರೇಶ್ ಮತ್ತಿತರರಿದ್ದರು.

error: Content is protected !!