ಪಕ್ಷದ ಹಿತದೃಷ್ಟಿಯಿಂದ 15 ಸಚಿವರ ವಿರುದ್ಧ ಸಿಎಂಗೆ ದೂರು ನೀಡಿದ್ದೇನೆ

ಪಕ್ಷದ ಹಿತದೃಷ್ಟಿಯಿಂದ 15 ಸಚಿವರ ವಿರುದ್ಧ ಸಿಎಂಗೆ ದೂರು ನೀಡಿದ್ದೇನೆ - Janathavaniಸರ್ಕಾರ-ಪಕ್ಷದ ವಿರುದ್ಧ ಹೇಳಿಕೆ ನೀಡಿಲ್ಲ, ಲಿಖಿತ ದೂರು ನೀಡಿಲ್ಲ

ಹೊನ್ನಾಳಿ, ಜ.30-  ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್  ಅವರ ಬಳಿ 15 ಕ್ಕೂ ಹೆಚ್ಚು ಸಚಿವರು ದುರಹಂ ಕಾರಿ ಮನೋಭಾವದಿಂದ ವರ್ತಿಸುತ್ತಿದ್ದಾರೆ ಎಂಬ ವಿಷ ಯದ ಬಗ್ಗೆ ಲಿಖಿತವಾದ ದೂರು ನೀಡಿಲ್ಲ. ಮೌಖಿಕವಾಗಿ ಹೆಸರಿಸಿ ವಿವರಿಸಿ ದ್ದೇನೆ ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

ಹೊನ್ನಾಳಿಯಲ್ಲಿಂದು ಮಾಧ್ಯಮದವರೊಂ ದಿಗೆ ಮಾತ ನಾಡಿದ ಅವರು, ಯಡಿಯಾರಪ್ಪ ನವರ ಅವಧಿಯಲ್ಲೂ ಇದೇ ರೀತಿ ಸಚಿವರ ವರ್ತನೆ ಬಗ್ಗೆ ವಿವರಿಸಿದ್ದೆ. ಬಸವರಾಜ ಬೊಮ್ಮಾಯಿ ಅವರ ಬಳಿಯೂ ಈ ವಿಷಯವಾಗಿ ಚರ್ಚಿಸಿದ್ದೇನೆ ಎಂದರು.

2023 ರ ಚುನಾವಣೆಯಲ್ಲಿ ಬಿಜೆಪಿ ಅಸ್ತಿತ್ವದ ಪ್ರಶ್ನೆ ಮುಂದಿಟ್ಟು ನಾನು ಈ ಎಲ್ಲಾ ಪ್ರಯತ್ನ ಮಾಡುತ್ತಿದ್ದು, ಪಕ್ಷಕ್ಕೆ ಮುಜುಗರ ತರುವುದಾಗಲೀ, ಪಕ್ಷದ ವಿರುದ್ಧವಾಗಲೀ ನಡೆದುಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಲವು ಸಚಿವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹವರ ಹೆಸರನ್ನು ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ಬಳಿ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.

ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಈ ವಿಷಯವಾಗಿ ಒಂದು ವಾರದೊಳಗಾಗಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಯಾವುದೇ ಸುಧಾರಣೆ ಹಾಗೂ ಪರಿಹಾರ ದೊರೆಯದಿದ್ದರೆ ಪಕ್ಷದ ಹಿತದೃಷ್ಟಿಯಿಂದ ಹೋರಾಟಕ್ಕೆ ಬದ್ದನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

error: Content is protected !!