ಬಳ್ಳೇಶ್ವರ ಗ್ರಾಮದಲ್ಲಿ ನಾಗದೇವತೆ ಪ್ರತಿಷ್ಠಾಪನೆ

ಹೊನ್ನಾಳಿ, ಜ.27-  ತಾಲ್ಲೂಕಿನ ಬಳ್ಳೇಶ್ವರ ಗ್ರಾಮದಲ್ಲಿ ನಾಗದೇವತೆಯ ಪ್ರತಿಷ್ಠಾಪನೆಯು ಪೂಜಾ ವಿಧಿ ವಿಧಾನಗಳ ಮೂಲಕ ಇಂದು ಬೆಳಿಗ್ಗೆ ನಡೆಯಿತು.

ಗ್ರಾಮದ ಒಂದೇ ಮನೆತನಕ್ಕೆ ಸೇರಿದ 19 ಕುಟುಂಬದವರಿಂದ ಈ ನಾಗದೇವತೆಯ ಪ್ರತಿಷ್ಠಾಪನಾ ಕಾರ್ಯ ನಡೆದಿದ್ದು ವಿಶೇಷವಾಗಿತ್ತು.

ಉಡುಪಿ  ಜಿಲ್ಲಾ ಕಾರ್ಕಳ ತಾಲ್ಲೂಕು ನಲ್ಲಿಕಾರರ 5 ಜನ ಪುರೊಹಿತರ ತಂಡದಿಂದ ಪೂಜಾ ವಿಧಿ – ವಿಧಾನಗಳು 2 ದಿನಗಳಿಂದ ನಡೆದಿದ್ದು, ಇಂದು 105 ನೇ ನಾಗದೇವತೆಯ ಪ್ರತಿಷ್ಠಾಪನಾ ಕಾರ್ಯ ನಡೆದಿದೆ. ಈ ದಿನ 3 ಎಡೆಯ 1 ಕಲ್ಲು,1 ಎಡೆಯ 4 ನಾಗರಕಲ್ಲುಗಳನ್ನು ಸ್ಥಾಪನೆ ಮಾಡಲಾಗಿದೆ.

4 ರಿಂದ 5 ತಲೆಮಾರಿನಷ್ಪು ಹಳೆಯದಾಗಿದ್ದ ನಾಗಪ್ಪನ ಕಲ್ಲುಗಳು ಶಿಥಿಲಗೊಂಡು ಚದುರಿಹೋಗಿದ್ದು, ಕುಟುಂಬದವರಲ್ಲಿ ಭಕ್ತಿ ಹಾಗೂ ಆಸಕ್ತಿ ಮೂಡಿದ್ದು, ಕುಟುಂಬಸ್ಥರಿಗೆ ಸೇರಿದ ಗ್ರಾಮದ ಸರ್ವೇ ನಂಬರ 7 ರಲ್ಲಿನ 5 ಗುಂಟೆಯಲ್ಲಿ ಈ ನಾಗದೇವತೆಯನ್ನು ಸ್ಥಾಪಿಸಲಾಗಿದೆ.

ಕಳೆದ 48 ದಿನಗಳಿಂದಲೂ ಪ್ರತಿಷ್ಠಾಪನಾ ಕಾರ್ಯ ನಡೆಸುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ದೇವಸ್ಥಾನ ಕಟ್ಟಡದ ಜೀರ್ಣೋದ್ಧಾರಕ್ಕೆ ಮುಂದಾಗುವುದಾಗಿ ಹಿರಿಯರು, ಗ್ರಾಮಸ್ಥರು ತಿಳಿಸಿದ್ದಾರೆ. ಇದರೊಂದಿಗೆ ಚೌಡಮ್ಮದೇವಿಯ ಪ್ರತಿಷ್ಠಾಪನೆ ಮಾಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು  ದರ್ಶನ ಪಡೆದರು.

error: Content is protected !!