ಮಲೇಬೆನ್ನೂರು, ಜ.23- ಕುಂಬಳೂರು ಗ್ರಾಮದ ನಿಟ್ಟೂರು ಸರ್ಕಲ್ನಲ್ಲಿ ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶತಮಾನದ ಸಂತ, ಪದ್ಮಭೂಷಣ, ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ 3 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಗ್ರಾಮಸ್ಥರು ಅರ್ಥಪೂರ್ಣವಾಗಿ ಆಚರಿಸಿದರು.
ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಡೀ ದಿನ ಅನ್ನ ದಾಸೋಹ ನಡೆಸಿದರು. ಕೆ. ಹೊಳೆಬಸಪ್ಪ, ನಾಗೋಳ್ ಕಲ್ಲೇಶ್ (ಬಾಬು), ಮಡಿವಾಳರ ಸಂಜೀವ್, ಎಂ. ವಾಸುದೇವಮೂರ್ತಿ, ಸಂಜಯ್ ಸ್ವಾಮಿ, ಗಂಗಾಧರಸ್ವಾಮಿ, ಬಾತಿ ಹನುಮೇಶ್, ಕೆ. ಕಾಮರಾಜ್, ನಾಗೋಳ ಮಂಜಣ್ಣ, ಧರ್ಮಾಚಾರಿ, ಹೆಚ್. ಶೇಖರಪ್ಪ, ನ್ಯಾಯಬೆಲೆ ಅಂಗಡಿ ವೀರೇಶ್ ಸೇರಿದಂತೆ, ಅನೇಕರು ಭಾಗವಹಿಸಿದ್ದರು.