ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ಆಗ್ರಹ

ಹರಪನಹಳ್ಳಿ, ಜ.21-  ತಾಲ್ಲೂಕಿನ ಹಾರಕನಾಳ್ ಗ್ರಾಮದಲ್ಲಿ ಗ್ರಂಥಾಲಯ ಕೇವಲ ನೆಪಮಾತ್ರಕ್ಕೆ ಇದ್ದು, ವಿದ್ಯಾರ್ಥಿ-ಯುವ ಜನರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಸುಸಜ್ಜಿತ ವಾದ ತಂತ್ರಜ್ಞಾನವುಳ್ಳ ಗ್ರಂಥಾಲಯ ನಿರ್ಮಾಣ ಮಾಡುವಂತೆ ಆಗ್ರಹಿಸಿ, ಎಐವೈಎಫ್ ಕಾರ್ಯ ಕರ್ತರು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿ, ಬಾಗಿಲಿಗೆ ಮನವಿ ಅಂಟಿಸಿದ ಘಟನೆ ಜರುಗಿದೆ.

ಈಗಿರುವ ಗ್ರಂಥಾಲಯದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿರುವುದರಿಂದ ಇದರ ಸದುಪಯೋಗವಾಗುತ್ತಿಲ್ಲ. ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಗ್ರಾಮದ ವಿದ್ಯಾರ್ಥಿ-ಯುವಜನರು ಸ್ಪರ್ಧಿಸಲು ಗುಣಮಟ್ಟದ ಗ್ರಂಥಾಲಯದ ಅವಶ್ಯತೆ ಇರುತ್ತದೆ. ಆದ್ದರಿಂದ ಗ್ರಾಮದ ಮಧ್ಯ ಭಾಗದಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಗುಣಮಟ್ಟದ ಕಟ್ಟಡ ಸಮೇತ, ಪೀಠೋಪಕರಣ ಗುಳುಳ್ಳ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಐವೈಎಫ್ ಗ್ರಾಮ ಸಮಿತಿ ಪದಾಧಿಕಾರಿಗಳಾದ ಹಾವೇರಿ ದೊಡ್ಡಬಸಪ್ಪ, ಹರೀಶ್, ಸಣ್ಣ ಬಸಪ್ಪ, ಪ್ರಶಾಂತ, ಪ್ರಮೋದ್, ಪ್ರವೀಣ್, ಮುಜುಬೂರ್ ರೆಹಮಾನ್ ಸೇರಿದಂತೆ ಇತರರು ಇದ್ದರು. 

error: Content is protected !!