ಚೌಡಯ್ಯರಿಂದ ಸಮಾಜ ತಿದ್ದುವ ಶ್ರೇಷ್ಠ ಕೆಲಸ

ಹರಿಹರ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್‌

ಹರಿಹರ, ಜ.21 – ಅಂಬಿಗರ ಚೌಡಯ್ಯನವರು ಸಮಾನತೆಯ ಹರಿಕಾ ರರು. ಸಮಾಜದಲ್ಲಿನ ಅಸ್ಪೃಶ್ಯತೆ ಯನ್ನು ಹೋಗಲಾಡಿಸಲು 12 ನೇ ಶತಮಾನ ದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕು – ಡೊಂಕುಗಳನ್ನು ತಿದ್ದುವ ಶ್ರೇಷ್ಠ ಕೆಲಸ ಮಾಡಿದ ಶರಣರು ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದ್ದಾರೆ.

ನಗರದ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ನಡೆದ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ ವೇಳೆ ಶ್ರೀ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡುತ್ತಿದ್ದರು. ಇದೇ ವೇಳೆ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.

ಅಂಬಿಗರ ಚೌಡಯ್ಯನವರು ನೇರ, ನಿರ್ಭೀತ ನುಡಿಗಳಿಂದ ವಚನಗಳನ್ನು ರಚಿಸಿದ್ದರು. ಇವರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡು ಉತ್ತಮ ದಾರಿಯಲ್ಲಿ ಸಾಗಬೇಕು ಎಂದು ಹೇಳಿದರು.

ತಹಶೀಲ್ದಾರ್‌ ಕೆ. ಬಿ. ರಾಮಚಂದ್ರಪ್ಪ ಮಾತನಾಡಿ, ಅಂಬಿಗರ ಚೌಡಯ್ಯನವರು ಒಳ್ಳೆಯ ವಿಚಾರಗಳನ್ನು ಹುಟ್ಟು ಹಾಕುವ ಕೌಶಲ್ಯ ಹೊಂದಿರುವ ವ್ಯಕ್ತಿಗಳಾಗಿದ್ದರು. ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದುವಲ್ಲಿ ಅಂಬಿಗರ ಚೌಡಯ್ಯನವರ ಶ್ರಮ ಅಪಾರವಾಗಿದೆ ಎಂದರು.

ಸಮಾನತೆಯ ಸಂದೇಶಗಳನ್ನು ನಾಡಿನಾದ್ಯಂತ ಸಾರಿದ ಅವರು, ನಾಡಿನ ಜನತೆಗೆ ದಾರಿದೀಪವಾಗಿದ್ದರು. ಅಂತಹ ಮಹಾನ್ ಚೇತನಗಳ ಗುರು ಪರಂಪರೆಯನ್ನು ಗೌರವಿಸಿ, ಒಳ್ಳೆಯ ಚಿಂತನ – ಮಂಥನ ಕಾರ್ಯಗಳು ನಡೆಯುವಂತಾಗಲಿ ಎಂದು ಹೇಳಿದರು.

ಈ ವೇಳೆ ಅಂಬಿಗರ ಸಮಾಜದ ಮುಖಂಡರಾದ ನಾಗರಾಜಪ್ಪ ಕರಿನಾಯ್ಕರ್ ಅವರು ಅಂಬಿಗರ ಚೌಡಯ್ಯನವರು ನಡೆದು ಬಂದ ದಾರಿ ಮತ್ತು ಅವರ ಆದರ್ಶಗಳ ವಿಚಾರಗಳ ಬಗ್ಗೆ ಸಭೆಯಲ್ಲಿ ಮಾತನಾಡಿದರು. 

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎಸ್.ಎಂ. ವಸಂತ್, ಪಾರ್ವತಮ್ಮ ಐರಣಿ, ಗ್ರೇಡ್-2 ತಹಶೀಲ್ದಾರ್ ಶಶಿಧರ್, ಅಂಬಿಗರ ಚೌಡಯ್ಯ ಸಮಾಜದ ಅಧ್ಯಕ್ಷ ಪೇಟೆ ಬಸವರಾಜಪ್ಪ,  ರಾಟಿ ರಮೇಶ್, ಮಹಾಂತೇಶಪ್ಪ ಕೆಂಚನಹಳ್ಳಿ, ಬಸವರಾಜಪ್ಪ ಹಲಸಬಾಳು, ಬಸವರಾಜಪ್ಪ ಗರಡಿಮನಿ, ಅಶೋಕ ಮಾಸ್ತರ್, ಪ್ರಕಾಶ್, ನಾರಾಯಣ ರಾವ್, ನಾಗರಾಜಪ್ಪ, ಮುದ್ದೇರ ಮಂಜಪ್ಪ, ನಿವೃತ್ತ ನೌಕರ ಕೃಷ್ಣಮೂರ್ತಿ, ಕುಂಬಳೂರು ವಾಸುದೇವ್, ಪರಮೇಶ್ವರಪ್ಪ, ಚುಕ್ಕಿನಾರ್ ಹೊನ್ನಪ್ಪ ಸಾರಥಿ, ಅಂಗಡಿ ಹಾಲಪ್ಪ, ಹನುಮಂತಪ್ಪ, ಜಯ್ಯಪ್ಪ, ನಾಗರಾಜ್, ದ್ಯಾಮಣ್ಣ, ಐರಣಿ ಶಂಕ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!