ಖಿನ್ನತೆಯ ಮನಸ್ಸುಗಳನ್ನು ಅರಳಿಸುವ ಶಕ್ತಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಿದೆ

ದಾವಣಗೆರೆ, ಜ. 20 – ಭಾರತೀಯ ಸಂಸ್ಕೃತಿ, ಸಂಸ್ಕಾರ, ಕನ್ನಡ ನಾಡು-ನುಡಿಯ ಇತಿಹಾಸ ಪರಂಪರೆಗಳನ್ನು ವೈಭವೀಕರಿಸುವ ಆದ್ಯ ಕರ್ತವ್ಯ. ಸಾಂಸ್ಕೃತಿಕ ಚಟುವಟಿಕೆಗಳನ್ನು ಉಳಿಸಿ, ಬೆಳೆಸುವುದರಿಂದ ಮಾನವನ ಜೀವನಕ್ಕೆ ಪೂರ್ಣ ಪ್ರಮಾಣದ ಸಾರ್ಥಕತೆ ಬರುತ್ತದೆ ಎಂದು ಪಾಲಿಕೆ ಮೇಯರ್ ಎಸ್.ಟಿ.ವೀರೇಶ್‍ ಅಭಿಪ್ರಾಯಪಟ್ಟರು.

ಇಲ್ಲಿನ ವಿದ್ಯಾನಗರದ ಶ್ರೀ ಮಾಗನೂರು ಬಸಪ್ಪ ರೋಟರಿ ಕ್ಲಬ್ ಸಭಾಂಗಣದಲ್ಲಿ ಕಲಾಕುಂಚ ವಿದ್ಯಾನಗರ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿದ್ದ ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಖಿನ್ನತೆಯ ಮನಸ್ಸುಗಳನ್ನು ಅರಳಿಸುವ, ಪುಳಕಿತಗೊಳಿಸುವ ಶಕ್ತಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಇದೆ ಎಂದರು.

ಕಲಾಕುಂಚ ವಿದ್ಯಾನಗರ ಶಾಖೆಯ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಿ.ದಿಳ್ಯಪ್ಪ ಮಾತನಾಡಿ, ಯಾವುದೇ ಕೆಲಸವನ್ನು ಕಾಯಕ ಪ್ರಜ್ಞೆಯಿಂದ, ಬದ್ಧತೆಯಿಂದ ನಿಷ್ಟೆಯಿಂದ ಕೈಗೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. 

ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‍ಶೆಣೈ ಅಧ್ಯಕ್ಷತೆ ವಹಿಸಿದ್ದರು.

ಪಾಲಿಕೆ ಸದಸ್ಯರುಗಳಾದ ಗೀತಾ ಬಿ. ದಿಳ್ಯಪ್ಪ, ವೀಣಾ ನಂಜಪ್ಪ,   ಗೌರಮ್ಮ ಗಿರೀಶ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ  ಮಾತನಾಡಿದರು.

ಕಲಾಕುಂಚ ವಿವಿಧ ಶಾಖೆಗಳ ಅಧ್ಯಕ್ಷರು ಗಳಾದ  ಶಾರದಮ್ಮ ಶಿವನಪ್ಪ,  ಸುಜಾತ ಬಸವರಾಜ್,  ಕುಸುಮಾ ಲೋಕೇಶ್, ಚನ್ನ ಬಸವ ಶೀಲವಂತ್, ಡಿ.ಹೆಚ್. ಚನ್ನಬಸಪ್ಪ, ವಿಶ್ವನಾಥ್, ಗಿರಿಜಮ್ಮ ನಾಗರಾಜಪ್ಪ, ಮಂಗಳಗೌರಿ ಉಪಸ್ಥಿತರಿದ್ದರು.

ಶಾಖೆಯ ಪ್ರಧಾನ ಕಾರ್ಯದರ್ಶಿ ಮುರಿ ಗಯ್ಯ ಕುರ್ಕಿ ಸ್ವಾಗತಿಸಿದರು. ಚಂದ್ರಶೇಖರ ಅಡಿಗ ಕಾರ್ಯಕ್ರಮ ನಿರೂಪಿಸಿದರು.

error: Content is protected !!