ವೇಮನ ಶ್ರೀಗಳು ಸಂತರಾಗಿ, ಸರಳರಾಗಿ ಮಾದರಿ

ಹರಿಹರ, ಜ.20 – ನಾಡಿನ ಸರ್ವ ಜನಾಂಗದ ಒಳಿತಿಗಾಗಿ ಶ್ರೀ ವೇಮಾನಂದ ಶ್ರೀಗಳ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡು ಹೋಗುವಂತೆ ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ನಡೆದ ವೇಮನ ಶ್ರೀಗಳ 610 ನೇ ಜಯಂತಿ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. 

ಜನ ಸಾಮಾನ್ಯರ ಕವಿಯಾದ ಯೋಗಿ ವೇಮನರು ಜಾತೀಯತೆ, ಅಂಧ ಶ್ರದ್ಧೆ, ಮೇಲು-ಕೀಳುಗಳ ತಾರತಮ್ಯದ ಬಗ್ಗೆ ತಮ್ಮ ಕಾವ್ಯದ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು ಎಂದರು.

ಅವರು ಸಂತರಾಗಿ ಬೆಳೆದು ಸರಳತೆಯಿಂದ ಬದುಕಿ ಮಾದರಿ ಎನಿಸಿದರು. ಬುದ್ದನ ಕರುಣೆ, ಅಂಬೇಡ್ಕರ್ ಅವರ ಸಮಾನತೆ, ಕಬೀರರ ಧಾರ್ಮಿಕ ಸೌಹಾರ್ದತೆ, ಬಸವಣ್ಣ ಮತ್ತು ಕುವೆಂಪು ಅವರ ವಿಶ್ವ ಮಾನವ ಸಂದೇಶ ಮುಂತಾದವುಗಳು ವೇಮನರ ಕಾವ್ಯದಲ್ಲಿ ಇವೆ. ಆದರೂ ಅವುಗಳಿಗೆ ಸಿಗಬೇಕಾದ ಪ್ರಚಾರ ಸಿಗಲಿಲ್ಲ, ಇದಕ್ಕೆ ರಾಜಕೀಯ ವಲಯದ ತಾರತಮ್ಯದ ಧೋರಣೆ ಕಾರಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌
ಕೆ.ಬಿ. ರಾಮಚಂದ್ರಪ್ಪ, ಎಪಿಎಂಸಿ ಸದಸ್ಯ ರಡ್ಡಿ ಹನುಮಂತಪ್ಪ, ಮಂಜುನಾಥ್ ರಡ್ಡಿ, ಕೊಟ್ರೇಶ್ ರಡ್ಡಿ, ವಿಷ್ಣು ರಡ್ಡಿ, ಶಿವಣ್ಣ ರಡ್ಡಿ, ಬಸಪ್ಪ ರಡ್ಡಿ, ದಿವಾಕರ, ಗಿರಿಯಪ್ಪ ರಡ್ಡಿ, ಕುರುಬ ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ, ಮಲೆಬೆನ್ನೂರು ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!