ದಾವಣಗೆರೆ, ಜ.20- ಜಿಲ್ಲೆಯಲ್ಲಿ ಆರಂಭಿಸಲುದ್ದೇಶಿಸಿರುವ ಏರ್ಪೋ ರ್ಟ್ ಸಂಬಂಧ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ದಿ ನಿಗಮದ ಅಧಿಕಾರಿಗಳು ಗುರುವಾರ ಜಿಲ್ಲೆಗೆ ಭೇಟಿ ನೀಡಿ ಎರಡು, ಮೂರು ಕಡೆ ಸ್ಥಳ ಪರಿಶೀಲಿಸಿ ಜನಪ್ರತಿನಿಧಿಗಳು, ಅಧಿಕಾರಿಗ ಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿ, ಸಚಿವರ ನಿರ್ದೇಶನದಂತೆ ಸ್ಥಳ ಪರಿವೀಕ್ಷಣೆ ಮಾಡಲಾಗಿದೆ. ಈಗಾಗಲೇ ಗುರುತಿಸಿರುವ ಸ್ಥಳಗಳು ಏರ್ಪೋ ರ್ಟ್ಗೆ ಸೂಕ್ತವಾಗಿದ್ದು, ಇದರಲ್ಲಿ ಎಷ್ಟು ಸರ್ಕಾರಿ ಜಾಗ ಇದೆಯೆಂದು ಪರಿಶೀಲಿಸಬೇಕಿದೆ ಎಂದರು.
ಮುಖ್ಯವಾಗಿ ಈ ಭಾಗದಲ್ಲಿ ರೈತರ ಉತ್ಪಾದನೆಗಳು ಹೆಚ್ಚಿರುವುದರಿಂದ ಕಾರ್ಗೊ ನಿಲ್ದಾಣ ಮಾಡುವುದಾದರೆ ಹೆಚ್ಚು ಅನುಕೂಲವಾಗಲಿದೆ. ಕಾರ್ಗೊ ನಿಲ್ದಾಣಕ್ಕೆ 600 ಎಕರೆ ಜಾಗ ಬೇಕಾಗುತ್ತದೆ ಎಂದರು.
ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ್ ಮಾತನಾಡಿ, ಈ ಸ್ಥಳ ಎಟಿಆರ್ 72 ಮಾದರಿ ಏರ್ಪೋರ್ಟ್ ನಿರ್ಮಿಸಲು ಸೂಕ್ತವಾಗಿದ್ದು, 340 ಎಕರೆ ಭೂಮಿ ಗುರುತಿಸಲಾಗಿದೆ. ಈ ಭಾಗದಲ್ಲಿ ಮಣ್ಣಿನ ರಚನೆ, ವಾತಾವರಣ ಸೇರಿದಂತೆ ಕೆಲ ತಾಂತ್ರಿಕ ಅಂಶಗಳನ್ನು ಅಭ್ಯಸಿಸಿ ವರದಿ ನೀಡಲಾಗುವುದು ಎಂದರು.
ಸಂಸದ ಜಿ.ಎಂ ಸಿದ್ದೇಶ್ವರ ಪ್ರತಿಕ್ರಿಯಿಸಿ, ಈಗಾಗಲೇ ವರದಿ ನೀಡಿರುವಂತೆ ಎಟಿಆರ್ 72 ಏರ್ಪೋರ್ಟ್ ಬಗ್ಗೆ ಸಿದ್ದತೆ ಮಾಡಿಕೊಳ್ಳಿ. ಮುಂದಿನ ಏರ್ಬಸ್ ನಿಲ್ದಾಣಕ್ಕೆ ಭೂಮಿಯನ್ನು ಗುರುತಿಸೋಣ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಏರ್ ಪೋರ್ಟ್ ಸಾಕಾರಕ್ಕೆ ಜಿಲ್ಲಾಡಳಿತದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದರು.
ತಾಂತ್ರಿಕ ಪರಿಣಿತರಾದ ಪೂರ್ವಿಮಠ, ಪೈಲೆಟ್ ಶಮನ್, ದೂಡಾ ಅಧ್ಯಕ್ಷ ದೇವರ ಮನೆ ಶಿವಕುಮಾರ್, ಯಶವಂತ್ರಾವ್ ಜಾಧವ್, ಉಪವಿಭಾಗಾಧಿ ಕಾರಿ ಮಮತ ಹೊಸಗೌಡರ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಶೀಲ್ದಾರ್ ಗಿರೀಶ್ ಇತರರು ಸಭೆಯಲ್ಲಿ ಹಾಜರಿದ್ದರು.