ಜನತಾವಾಣಿ ಸಂಪಾದಕ ಎಂ.ಎಸ್. ವಿಕಾಸ್ ಅವರಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕ್ಯಾಲೆಂಡರ್ ಬಿಡುಗಡೆ
ದಾವಣಗೆರೆ, ನ. 17 – ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕ್ಯಾಲೆಂಡರ್ ಅನ್ನು ಜನತಾವಾಣಿ ಸಂಪಾದಕ ಎಂ.ಎಸ್. ವಿಕಾಸ್ ಬಿಡುಗಡೆ ಮಾಡಿದ್ದಾರೆ.
ಪತ್ರಿಕಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೇರೆಲ್ಲ ಉತ್ಪಾದನಾ ವಲಯಗಳಿಗೆ ಹೋಲಿಸಿದರೆ, ಶಿಕ್ಷಣ ಅತ್ಯಂತ ಮಹತ್ವದ್ದು. ವಿದ್ಯಾರ್ಥಿಗಳ ಇಡೀ ಜೀವನದ ಅಡಿಪಾಯ ಶಿಕ್ಷಣದಿಂದ ನಿರ್ಧಾರವಾಗುತ್ತದೆ ಎಂದರು.
ಮುಂದಿನ 30-40 ವರ್ಷಗಳಲ್ಲಿ ದೇಶಕ್ಕೆ ಅದ್ಭುತವಾದ ಭವಿಷ್ಯ ಬೇಕು ಎನ್ನುವುದಾದರೆ ಈಗಲೇ ಮಕ್ಕಳ ಶಿಕ್ಷಣಕ್ಕೆ ಒಳ್ಳೆಯ ಅಡಿಪಾಯ ಹಾಕಬೇಕು. ಇದಕ್ಕಾಗಿ ಸರ್ಕಾರ ಸೂಕ್ತ ನೀತಿಗಳ ಮೂಲಕ ಶಾಲೆಗಳಿಗೆ ಸಹಕರಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಸಿ. ಲಿಂಗರಾಜು, ಉಪಾಧ್ಯಕ್ಷರಾದ ಎಂ.ಎಸ್. ಸಂತೋಷ್‌ಕುಮಾರ್, ಆರ್.ಎಲ್. ಪ್ರಭಾಕರ್, ಸಹ ಕಾರ್ಯದರ್ಶಿಗಳಾದ ಕೆ.ಎಸ್. ಮಂಜುನಾಥ ಅಗಡಿ, ಎ.ಎನ್. ಪ್ರಸನ್ನ ಕುಮಾರ್, ಖಜಾಂಚಿ ವಿಜಯ್ ರಾಜ್, ಸಂಘಟನಾ ಕಾರ್ಯ ದರ್ಶಿಗಳಾದ ಕೆ.ಸಿ. ಮಂಜು, ಹೆಚ್.ಜೆ. ಮೈನುದ್ದೀನ್, ಸಂಚಾಲಕರಾದ ಕೆ.ಎಸ್. ಪ್ರಭು ಕುಮಾರ್, ಎಂ.ಎನ್. ಲೋಕೇಶ್, ಸೈಯದ್ ಮನ್ ಪುಶ್, ನಿರ್ದೇಶಕರಾದ ವಿಜಯ್‌ಕುಮಾರ್, ಹೆಚ್. ಜಯಣ್ಣ, ಬಿ. ಶಶಿಧರ್, ಸಹನಾ ರವಿ, ಬಿ. ಅನುಸೂಯ, ಡಿ.ವಿ. ನಾಗರಾಜ ಶೆಟ್ಟಿ, ಟಿ.ಕೆ. ಪೃಥ್ವಿರಾಜ್, ಕೆ. ಸುರೇಶ, ಪಿ.ಎಸ್. ಅರವಿಂದ, ಟಿ.ಆರ್. ರವಿ, ಅಶ್ವಿನಿ ಕೃಷ್ಣ ಉಪಸ್ಥಿತರಿದ್ದರು.