ದಾವಣಗೆರೆ,ಜ.18- ಅಂತರರಾಷ್ಟ್ರೀಯ ಖ್ಯಾತಿಯ ಬಾಲ ಪ್ರತಿಭೆ ಅದಿತಿ ಆಚಾರ್ಯ ಅವರಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ `ನಾಟ್ಯಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುವೆಂಪು ಕನ್ನಡ ಭವನದಲ್ಲಿ ಜರುಗಿದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಷ್ಟಾವಧಾನಿ ಮೈಸೂರಿನ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಜಾನಪದ ತಜ್ಞ ಡಾ. ಎಂ.ಜಿ.ಈಶ್ವರಪ್ಪ, ಕಲಾಕುಂಚದ ಸಾಲಿಗ್ರಾಮ ಗಣೇಶ್ಶೆಣೈ, ಜ್ಯೋತಿ ಗಣೇಶ್ಶೆಣೈ ಉಪಸ್ಥಿತರಿದ್ದರು.
February 24, 2025