ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿದ್ದ ರವೀಂದ್ರ

ಹರಪನಹಳ್ಳಿ, ಜ. 16- ತಮ್ಮ ಸಹೋದರ, ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಕೇವಲ ರಾಜಕಾರಣಿ ಆಗಿರಲಿಲ್ಲ. ಕಲೆ, ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿದ್ದರು ಎಂದು ಕೆಪಿಸಿಸಿ ಮಹಿಳಾ ಘಟ ಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ತಾಲ್ಲೂಕಿನ ನಿಟ್ಟೂರು ಗ್ರಾಮದ ಮರಳು ಪಾಯಿಂಟ್ ಬಳಿ ಎಂ.ಪಿ. ರವೀಂದ್ರ ಪ್ರತಿಷ್ಠಾನ ಹಾಗೂ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಔತಣಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಂ.ಪಿ.ರವೀಂದ್ರ ಅವರು ಸಿಹಿ ಭೋಜನ ಹಾಗೂ ಒಟ್ಟಾಗಿ ಸಂಗೀತ ಆಲಿಸುವಂತಹ ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದರು. ಹಾಗಾಗಿ ಅವರ ಅಗಲಿಕೆಯ ನಂತರವೂ ಅವರ ಯಾವುದೇ ಕಾರ್ಯಕ್ರಮಗಳನ್ನು ನಿಲ್ಲಿಸದೇ ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಅವರು ತಿಳಿಸಿದರು. 

ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಮಾಗಾನಹಳ್ಳಿ ಉದಯಶಂಕರ್, ಹಲುವಾಗಲು ಗ್ರಾ.ಪಂ. ಮಾಜಿ  ಅಧ್ಯಕ್ಷರಾದ ರತ್ನಮ್ಮ ಸೋಮಪ್ಪ,  ತಾ.ಪಂ. ಮಾಜಿ ಅಧ್ಯಕ್ಷ ಹೆಚ್. ರಾಜಪ್ಪ, ಪುರಸಭೆ ಸದಸ್ಯರುಗಳಾದ  ಎಂ.ವಿ. ಅಂಜಿನಪ್ಪ, ಗೊಂಗಡಿ ನಾಗರಾಜ, ಉದ್ದಾರ ಗಣೇಶ, ಲಾಟಿ ದಾದಾಪೀರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಪುಷ್ಪಾ ದಿವಾಕರ್, ಮುಖಂಡ ಸುನೀಲ್‌ಕುಮಾರ್, ಬಾಣದ ಅಂಜಿನಪ್ಪ, ಟಿ. ಉಮಾಕಾಂತ, ಮೈದೂರು ರಾಮಣ್ಣ, ಹುಲಿಕಟ್ಟೆ ಚಂದ್ರಪ್ಪ, ಮತ್ತೂರು ಬಸವರಾಜ, ಕಲ್ಲಹಳ್ಳಿ ಗೋಣೆಪ್ಪ, ಕಂಚಿಕೇರಿ ಜಯಲಕ್ಷ್ಮಿ, ಮಂಜುಳಾ ಗುರುಮೂರ್ತಿ, ಚಿಕ್ಕೇರಿ ಬಸಪ್ಪ, ಹರಿಯಮ್ಮನಹಳ್ಳಿ ಶಿವರಾಜ್, ಸಾಸ್ವಿಹಳ್ಳಿ ನಾಗರಾಜ್, ಉಮಾಶಂಕರ್, ಕವಿತಾ ಸುರೇಶ, ಗುಂಡಗತ್ತಿ ನೇತ್ರಾವತಿ ಹಲುವಾಗಲು, ಎನ್.ಟಿ. ಸೋಮಣ್ಣ, ಶಿಕ್ಷ ಮೇಘರಾಜ, ಹಾರಕ ನಾಳು ಪ್ರಕಾಶಗೌಡ, ರಿಯಾಜ್, ಪ್ರಸಾದ ಕಾವಡಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!