ಎಸ್ಸೆಸ್ – ಎಸ್ಸೆಸ್ಸೆಂ ಸಹಯೋಗದಲ್ಲಿ ಎಂಸಿಸಿ `ಬಿ’ ಬ್ಲಾಕ್ ನಲ್ಲಿ ಬೂಸ್ಟರ್ ಲಸಿಕೆ

ದಾವಣಗೆರೆ, ಜ. 11- ಮಹಾನಗರ ಪಾಲಿಕೆಯ 38 ನೇ ವಾರ್ಡ್‌ನ ಎಂಸಿಸಿ ಬಿ ಬ್ಲಾಕ್ ನ  ಸ್ವಿಮ್ಮಿಂಗ್ ಫೂಲ್ ಆವರಣದಲ್ಲಿ ಕೊರೊನಾ ಎರಡು ಡೋಸ್ ಲಸಿಕೆ ಪಡೆದ ಸುಮಾರು 300 ಜನರಿಗೆ ಇಂದು ಬೂಸ್ಟರ್ ನೀಡಲಾಯಿತು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸಹಯೋಗ ದೊಂದಿಗೆ 38ನೇ ವಾರ್ಡ್‌ನ ಮಹಾನಗರ ಪಾಲಿಕೆಯ ಸದಸ್ಯ ಜಿ.ಎಸ್. ಗಡಿಗುಡಾಳ್ ಮಂಜುನಾಥ್ ಅವರ ನೇತೃತ್ವದಲ್ಲಿ ಈ ಲಸಿಕೆ ನೀಡಲಾಯಿತು.

60 ವರ್ಷ ಮೇಲ್ಪಟ್ಟವರು, ಅಸ್ವಸ್ಥರಾಗಿರುವವರು ಹಾಗೂ ಈಗಾಗಲೇ 2 ನೇ ಡೋಸ್ ಪಡೆದು 9 ತಿಂಗಳು ಆದವರಿಗೆ ಕೋವಿಡ್ -19 ಮುನ್ನೆಚ್ಚರಿಕೆ ಲಸಿಕೆ ಬೂಸ್ಟರ್ ಡೋಸ್ ಕೊಡಲಾಗುತ್ತಿದೆ. ಎಸ್‌ಎಸ್ಐಎಂಎಸ್ ಪ್ರಾಂಶು ಪಾಲ ಬಿ.ಜಿ. ಪ್ರಸಾದ್ ಅವರು ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮೊದಲ ಹಾಗೂ ಎರಡನೇ ಡೋಸ್ ಕೋವಿಶೀಲ್ಡ್ ಪಡೆದಿದ್ದಲ್ಲಿ ಈಗ ಬೂಸ್ಟರ್ ಡೋಸ್ ಕೂಡ ಕಡ್ಡಾಯವಾಗಿ ಕೋವಿಶೀಲ್ಡ್ ಅನ್ನೇ ಪಡೆಯತಕ್ಕದ್ದು. ಇದೇ ಮಾದರಿ ಕೋವ್ಯಾಕ್ಸಿನ್ ಗೂ ಅನ್ವಯವಾಗುತ್ತದೆ.

ನಾಳೆಯೂ ಬೂಸ್ಟರ್ :  ಇಂದು ಮೂರು ನೂರು ಜನರು ಬಂದು ಈಗಾಗಲೇ ಲಸಿಕೆ ಪಡೆದಿದ್ದಾರೆ. ನಾಳೆಯೂ ಸಹ ಈ ಕಾರ್ಯಕ್ರಮ ಮುಂದುವರಿಯಲಿದೆ. ಜನರು ಇಲ್ಲಿಗೆ ಬಂದು ಲಸಿಕೆ ಪಡೆಯಬಹುದು ಎಂದು ಗಡಿಗುಡಾಳ್ ಮಂಜುನಾಥ್ ತಿಳಿಸಿದ್ದಾರೆ.

error: Content is protected !!