ದಾವಣಗೆರೆ, ಜ.5- ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಫ್ಲೆಕ್ಸ್, ಬ್ಯಾನರ್, ಫಲಕ ಅಳವಡಿಸುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು, ಫ್ಲೆಕ್ಸ್/ಬ್ಯಾನರ್ ಮುದ್ರಣ ಕಾರರು ಸರ್ಕಾರಿ, ಖಾಸಗಿ, ಸಾರ್ವಜನಿಕ ಆಸ್ತಿ ಗಳು, ವಿದ್ಯುತ್ ಕಂಬಗಳು, ಮೀಡಿಯನ್ಸ್, ಡಿವೈ ಡರ್ಸ್, ಕಲ್ವರ್ಟ್, ರಸ್ತೆ ಬದಿ ಮರಗಳು, ಸರ್ಕಲ್ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್, ಬಾವುಟ, ಬಂಟಿಂಗ್ಸ್ ಅಳವಡಿಸು ತ್ತಿದೆ. ಇದರಿಂದಾಗಿ ಸಾರ್ವಜನಿಕ ಪ್ರದೇಶ ಗಳನ್ನು ವಿರೂಪ ಗೊಳಿಸುತ್ತಿರುವುದು ಹೆಚ್ಚಾಗುತ್ತಿದೆ.
ಸಾರ್ವಜನಿಕ ಆಸ್ತಿಗಳನ್ನು ವಿರೂಪಗೊಳಿಸು ವುದು, ಕರ್ನಾಟಕ ಮುಕ್ತ ಸ್ಥಳಗಳು (ವಿರೂಪಗೊಳಿ ಸುವಿಕೆ ತಡೆಗಟ್ಟುವಿಕೆ) ಕಾಯ್ದೆ-1981ರ ಕಲಂ (3) ರನ್ವಯ ಉಲ್ಲಂಘನೆ ಹಾಗೂ ಶಿಕ್ಷಾರ್ಹ ಅಪರಾಧ ವಾಗುತ್ತದೆ. ಕಾಯ್ದೆ ಪ್ರಕಾರ ಆರು ತಿಂಗಳು ಜೈಲು ಶಿಕ್ಷೆ ಅಥವಾ ರೂ.1000/- ದಂಡ ಅಥವಾ ಎರಡೂ ರೀತಿಯ ದಂಡನೆ ವಿಧಿಸಲು ಅವಕಾಶವಿರುತ್ತದೆ ಎಂದು ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.