ಸಾವಿತ್ರಿಬಾಯಿ ಫುಲೆ ಆದರ್ಶಗಳನ್ನು ಸರ್ಕಾರ ರೂಢಿಸಿಕೊಳ್ಳಬೇಕು

ರಾಣೇಬೆನ್ನೂರು, ಜ. 4- ದೇಶದಲ್ಲಿ ಬೇರೂರಿದ್ದ ಮೂಢನಂಬಿಕೆ, ಅಸ್ಪೃಶ್ಯತೆ ಯಂತಹ ಸಾಮಾಜಿಕ ಅನಿಷ್ಟಗಳನ್ನು ತೊಲಗಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಆದರ್ಶಗಳನ್ನು ಅಧಿಕಾರಕ್ಕೋಸ್ಕರ, ಜಾತಿ, ಜಾತಿ ಎಂದು ವಿಷಬೀಜ ಬಿತ್ತಿ ಅಸ್ಪೃಶ್ಯತೆ ಯನ್ನು 22ನೇ ಶತಮಾನ ದವರೆಗೂ ಜೀವಂತ ಇಟ್ಟಿರುವ ನಮ್ಮನ್ನಾಳುವ ಸರ್ಕಾರ ಗಳು ರೂಢಿಸಿಕೊಳ್ಳಬೇಕೆಂದು ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಸರ್ಕಾರವನ್ನು ಕುಟುಕಿದರು.

ಶಿಕ್ಷಕಿಯರ ಮೊದಲ ಗುರು ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಮುಷ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಗ್ರಾಮಸ್ಥರ ಪರವಾಗಿ ಎಸ್‌ಡಿಎಂಸಿಯವರ ಪರವಾಗಿ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯೋಪಾಧ್ಯಾಯ ಎಂ. ರಾಜಶೇ ಖರ, ಶಿಕ್ಷಕಿ ಕೆ.ಟಿ. ರಾಧಾ, ಶಿಕ್ಷಕ ಬಸವರಾಜ ಬಿ. ಕಾಯಕದ, ನಾಗರಾಜ ಬಿಳಸೂರಮಠ ಅವರನ್ನು ಸತ್ಕರಿಸಲಾಯಿತು. 

ಗ್ರಾಮದ ಮುಖಂಡರಾದ ಹರಿಹರಗೌಡ ಎಸ್. ಪಾಟೀಲ, ಎಸ್.ಡಿ.ಎಂಸಿ. ಅಧ್ಯಕ್ಷ ಯಲ್ಲಪ್ಪ ಆರ್. ಓಲೇಕಾರ, ಬಸವರಾಜ ಯಲ್ಲಕ್ಕನವರ, ಜಮಾಲ್ ಸಾಬ್ ಶೇಕ್‌ಸನದಿ, ಅಕ್ಬರ್ ಸಾಬ್ ಶೇಖ ಸಂದಿ, ಮಲಕಪ್ಪ ಲಿಂಗದಳ್ಳಿ, ಶಂಭನಗೌಡ ಪಾಟೀಲ, ಅಬ್ದುಲ್ ರೆಹಮಾನ್ ಶೇಕ್‌ಸನದಿ, ಭೀಮಪ್ಪ ಬಣಕಾರ, ರಾಮಪ್ಪ ಮುಷ್ಟೂರನಾಯ್ಕ, ಮಂಜಪ್ಪ ಮುಷ್ಠುರನಾಯ್ಕ ಉಪಸ್ಥಿತರಿದ್ದರು.

ಅನುಷಾ ಪ್ರಾರ್ಥಿಸಿದರು. ಅಣ್ಣಪ್ಪ ಉದಗಟ್ಟಿ ಸ್ವಾಗತಿಸಿದರು. ಮಾರುತಿ ಮುಷ್ಟೂರ ನಾಯ್ಕ ವಂದಿಸಿದರು.

error: Content is protected !!