ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಿಸಿ

ದಾವಣಗೆರೆ, ಜ.2- ರಾಜ್ಯದ ಶೈಕ್ಷಣಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಅತಿಥಿ ಉಪನ್ಯಾಸಕರನ್ನು ಗೌರವದಿಂದ ಕಾಣಬೇಕೆಂದು ಅಖಿಲ ಭಾರತ ಯುವಜನ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಒತ್ತಾಯಿಸಿದ್ದಾರೆ.

 ಅತಿಥಿ ಉಪನ್ಯಾಸಕರು ಅಲ್ಪ ಗೌರವ ಧನಕ್ಕೆ ಹಲವಾರು ವರ್ಷಗಳಿಂದ ದುಡಿಯುತ್ತಿದ್ದಾರೆ. ಪ್ರತಿ ವರ್ಷ ಗೌರವ ಧನ ಹೆಚ್ಚಳ ಸೇರಿದಂತೆ, ಸೇವಾ ಭದ್ರತೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ, ಸರ್ಕಾರ ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೆೊಂಡಿಲ್ಲ. ವಿವಿಧ ರಾಜ್ಯ ಗಳಿಗೆ ಹೋಲಿಕೆ ಮಾಡಿಕೊಂಡರೆ ರಾಜ್ಯದಲ್ಲಿ ಅತಿಥಿ ಉಪ ನ್ಯಾಸಕರಿಗೆ ಅತ್ಯಂತ ಕಡಿಮೆ ಗೌರವ ಧನ ಕೊಡಲಾಗುತ್ತಿದೆ.

ಸರ್ಕಾರ ಸೇವಾ ಭದ್ರತೆಯನ್ನು ನೀಡಬೇಕು ಹಾಗೂ ಈ ಉಪನ್ಯಾಸಕರ ಗೌರವ ಧನವನ್ನು ಹೆಚ್ಚಿಸಬೇಕೆಂದು ಆವರಗೆರೆ ವಾಸು ಆಗ್ರಹಿಸಿದ್ದಾರೆ. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಜಿಲ್ಲಾ ಕಾರ್ಯದರ್ಶಿ ಎ. ತಿಪ್ಪೇಶಿ, ಉಪಾಧ್ಯಕ್ಷರಾದ ನಿಟ್ಟು ವಳ್ಳಿ ಜೀವನ್, ಫಜಲುಲ್ಲಾ, ಇರ್ಫಾನ್, ಮಂಜುನಾಥ, ಮಳಲ್ಕೆರೆ ರುದ್ರೇಶ್, ಮಳಲ್ಕೆರೆ ಗುರುಮೂರ್ತಿ, ಸಿ. ಪರಶುರಾಮ್ ಗುದ್ದಾಲ್, ಮಧು, ಮಂಜುನಾಥ ಓಬಳಾ ಪುರ, ಹನುಮಂತ ನಿಟ್ಟುವಳ್ಳಿ, ಎ.ಕೆ.ಮಂಜುನಾಥ ಮಾರ್ಕೆಟ್, ಉಮೇಶ್ ಭಾರತ್ ಕಾಲೋನಿ, ಮಂಜು ನಾಥ ಹಳೇ ಚಿಕ್ಕನಹಳ್ಳಿ ಮಂಜುನಾಥ್ ಹೆಚ್.ಎಂ. ಮಂಜುನಾಥ್ ದೊಡ್ಡಮನಿ, ಸಂತೋಷ್, ಅಫ್ರೋಜ್ ಉಪಸ್ಥಿತರಿದ್ದರು. 

error: Content is protected !!