ನಗರದ ಸುನೇಹಾ ಕಾಸಲ್‌ ಅವರಿಗೆ ನಾಲ್ಕು ಸ್ವರ್ಣ ಪದಕ

ದಾವಣಗೆರೆ, ಜ.2- ಹೈದರಾಬಾದ್‍ನಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾ ನಿಲಯದ ಎನ್.ಎ.ಎಲ್.ಎಸ್.ಎ.ಆರ್. (ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರೀಸರ್ಚ್) ಈ ಕೋರ್ಸ್‍ನ ಅಂತಿಮ ಪರೀಕ್ಷೆಯಲ್ಲಿ ನಗರದ ಸುನೇಹಾ ಕಾಸಲ್, ತನ್ನ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ನಾಲ್ಕು ಸ್ವರ್ಣ ಪದಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ. ರಮಣ ಅವರು ಈ ಪದಕಗಳನ್ನು ಈ ವಿದ್ಯಾರ್ಥಿನಿಗೆ ಪ್ರದಾನ ಮಾಡಿದರು. ಸುನೇಹಾ, ನಗರದ ಕಾಸಲ್ ಅರುಣ್‍ಕುಮಾರ್ ಮತ್ತು ಪದ್ಮಾ ಅರುಣ್‍ಕುಮಾರ್ ಅವರ ದ್ವಿತೀಯ ಪುತ್ರಿ. ತನ್ನ ಪದವಿಪೂರ್ವ ಹಂತದವರೆಗಿನ ಶಿಕ್ಷಣವನ್ನು ದಾವಣಗೆರೆಯಲ್ಲಿಯೇ ಪಡೆದಿದ್ದ ಈಕೆ, ರಾಷ್ಟ್ರಮಟ್ಟದ ಸ್ಪರ್ಧಾ ಪರೀಕ್ಷೆ ಕ್ಲ್ಯಾಟ್‍ನಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಈ ವಿದ್ಯಾನಿಲಯದಲ್ಲಿ ಪ್ರವೇಶ ಪಡೆದಿದ್ದಳು.

ಅಂತರರಾಷ್ಟ್ರೀಯ ಮಾನ್ಯತೆ ಇರುವ ಈ ಕಾನೂನು ವಿಶ್ವವಿದ್ಯಾನಿಲಯದಲ್ಲಿ  ಪ್ರವೇಶ ಪಡೆಯುವುದೇ ಒಂದು ಸಾಧನೆ ಎಂದು ಪರಿಗಣಿಸಲಾಗುತ್ತಿದೆ. ಅಂತಹದರಲ್ಲಿ ಅಲ್ಲಿಯ ಅಂತಿಮ ಪರೀಕ್ಷೆಯಲ್ಲಿ ನಾಲ್ಕು ಸ್ವರ್ಣ ಪದಕಗಳನ್ನು ಪಡೆದಿರುವ ಇವರ ಸಾಧನೆಯ ಬಗ್ಗೆ ಶ್ರೀಮತಿ ಸುಜಾತಾ ಕೃಷ್ಣ, ಕಾಸಲ್ ರಾಧಾಕೃಷ್ಣ ಗುಪ್ತ  ಮತ್ತು ಇಡೀ ಕಾಸಲ್ ಮನೆತನದವರು ಅಭಿನಂದಿಸಿದ್ದಾರೆ.  

error: Content is protected !!