ಹರಿಹರ ತಾ. ಆಡಳಿತದ ಬಸವ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಾಮಚಂದ್ರಪ್ಪ
ಹರಿಹರ, ಮೇ 4 – ನಾಡಿನಾದ್ಯಂತ ಆಚರಣೆ ಮಾಡು ತ್ತಿರುವ ದಾರ್ಶನಿಕರ ಜಯಂತಿ ಗಳು ಕೇವಲ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತ ವಾಗಿವೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ತಾಲ್ಲೂಕು ಆಡಳಿತ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ನಡೆದ ಬಸವೇಶ್ವರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನಾದ್ಯಂತ ಅನೇಕ ಮಹಾತ್ಮರ ಮತ್ತು ದಾರ್ಶನಿಕರ ಜಯಂತಿ ಆಚರಣೆ ಮಾಡುವು ದರಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಗಳನ್ನು ತರಬಹುದು ಎಂದು ನಿರೀಕ್ಷೆಗಿಂತ ಹೆಚ್ಚು ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಿವೆ. ತಿಂಗಳಲ್ಲಿ ನಾಲ್ಕು ಜನರ ದಾರ್ಶನಿಕರ ಜಯಂತಿ ಆಚರಣೆ ಮಾಡುವುದರಿಂದ ಜಯಂತಿ ಆಚರಣೆ ಬಗ್ಗೆ ಹೆಚ್ಚು ತಾತ್ಸಾರ ಮನೋಭಾವ ಹೆಚ್ಚಾಗಿದೆ ಎಂದು ಹೇಳಿದರು.
ಬಸವಣ್ಣನವರು ಕಲ್ಯಾಣದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಕ್ರಾಂತಿಯನ್ನು ಮಾಡಿ ವಿಶ್ವಗುರು ಪ್ರಖ್ಯಾತಿಯನ್ನು ಹೊಂದಿದ್ದರು. 12 ನೇ ಶತಮಾನದಲ್ಲಿ ಬಿಜ್ಜಳ ರಾಜನ ಮಂತ್ರಿಯಾಗಿ ಆಡಳಿತದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು ಈಗಿನ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಅಡಿಗಲ್ಲು ಆಗಿದೆ ಎಂದರು.
ಅನುಭವ ಮಂಟಪದಲ್ಲಿ ಎಲ್ಲಾ ವರ್ಗದ ಜನತೆಗೆ ಸರಿಯಾದ ರೀತಿಯಲ್ಲಿ ಸ್ಥಾನಗಳನ್ನು ನೀಡಿ ಸಮಾನತೆ ತೋರಿಸಿದ್ದರು. ಸಮಾಜ, ಸರ್ಕಾರ ಮತ್ತು ಮೌಲ್ಯದ ಬಗ್ಗೆ ಸಂವಿಧಾನದ ಅಂಶಗಳು ಹೇಗೆ ಅದಕ್ಕಾಗಿ ನಾನು ಹೇಗೆ ನಡೆದುಕೊಂಡು ಹೋಗಬೇಕು ಎಂಬುದನ್ನು 12 ನೇ ಶತಮಾನದಲ್ಲಿ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಎಂದವರು ಹೇಳಿದರು.
ಉಪನ್ಯಾಸಕ ದಾವಣಗೆರೆ ನಾಗರಾಜ್ ಮಾತನಾಡಿ, 12 ನೇ ಶತಮಾನದಲ್ಲಿ ಭಕ್ತಿಗೆ ಭಂಢಾರವಾಗಿ, ಕಾಯಕಕ್ಕೆ ದಣಿಯಾಗಿ, ದಲಿತರ ಧ್ವನಿಯಾಗಿ ಮಹಿಳೆಯರ ಮನ್ನಣೆಯಾಗಿ, ಸಾಹಿತ್ಯಕ್ಕೆ ಸಿರಿಯಾಗಿ ಅನೇಕ ಅನಿಷ್ಟ ವಿಚಾರಗಳನ್ನು ತೊಲಗಿಸಿದ ವಿಶ್ವದ ಮಹಾನ್ ಚೇತನ ಬಸವಣ್ಣನವರು ಎಂದು ಹೇಳಿದರು.
ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಜೆ. ಶಿವಾನಂದಪ್ಪ, ಉಪಾಧ್ಯಕ್ಷ ಟಿ.ಜೆ. ಮುರುಗೇಶಪ್ಪ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಇಓ ಬಿ.ಸಿ. ಸಿದ್ದಪ್ಪ, ಸಿಪಿಐ ಸತೀಶ್ ಕುಮಾರ್, ಪೌರಾಯುಕ್ತ ಐ.ಬಸವರಾಜ್, ನಗರಸಭೆ ಸದಸ್ಯೆ ಉಷಾ ಮಂಜುನಾಥ್, ಅಖಿಲ ಭಾರತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಜಿ.ಎಂ. ರೂಪಾ, ಜಿ.ಕೆ. ಮಲ್ಲಿಕಾರ್ಜುನ, ಕೊಟ್ರೇಶ್ ಭಾನುವಳ್ಳಿ, ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಪ್ರಕಾಶ್ ಕೋಳೂರು, ರುದ್ರೇಗೌಡ, ಜಿ.ಕೆ. ವೀರಣ್ಣ, ದಲಿತ ಸಂಘರ್ಷ ಸಮಿತಿ ಸಂಚಾಲಕ ಪಿ.ಜೆ. ಮಹಾಂತೇಶ್, ತೋಟಗಾರಿಕೆ ಇಲಾಖೆಯ ಕವಿತ, ಸಿಡಿಪಿಓ ನಿರ್ಮಲ, ಲೋಕೋಪಯೋಗಿ ಶಿವಮೂರ್ತಿ, ಈಶಪ್ಪ ಬೂದಿಹಾಳ, ಹರೀಶ್ ಬನ್ನಿಕೋಡು, ಲೋಕೇಶ್ ಬನ್ನಿಕೋಡು, ಉಮೇಶ್ ಗಂಗನಹರಸಿ, ಎಂ. ಚಿದಾನಂದ ಕಂಚಿಕೇರಿ, ಹೆಚ್.ಸಿ. ಕೀರ್ತಿಕುಮಾರ್, ಶೇಖರಗೌಡ, ಮಂಜುನಾಥ್ ಪೂಜಾರ್, ನಾಗರಾಜ್, ಎನ್.ಇ. ಸುರೇಶ್, ಉಮ್ಮಣ್ಣ ಎಂ.ಇ. ಹೊರಕೇರಿ, ಅಂಗಡಿ ಮಂಜುನಾಥ್, ಅಂಜು ರಾಜನ್ನವರ್ ಮತ್ತಿತರರು ಉಪಸ್ಥಿತರಿದ್ದರು.