ಸಾಮರಸ್ಯದಿಂದ ಬದುಕೋಣ : ಶಾಸಕ ಎಸ್.ವಿ. ರಾಮಚಂದ್ರ ಕರೆ

ಜಗಳೂರು, ಮೇ 4- ಹಿಂದೂ ಮತ್ತು ಮುಸಲ್ಮಾನರು ಸಾಮರಸ್ಯದಿಂದ ಬದುಕಿದರೆ ಮಾತ್ರ ಸಮಾಜ ಸುಸ್ಥಿರವಾಗಿ ಇರಲು ಬದುಕೋಣ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. 

ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಹಿನ್ನೆಲೆ ಮುಸ್ಲಿಂ ಸಮಾಜದವರ ಪ್ರಾರ್ಥನೆ ಯಲ್ಲಿ ಭಾಗವಹಿಸಿ  ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಯಾವುದೇ ಅಶಾಂತಿ, ಗದ್ದಲವಿ ಲ್ಲದಂತೆ ಎಲ್ಲರೂ ಅಣ್ಣ- ತಮ್ಮಂದಿರಂತೆ ಬದುಕುತ್ತಿ ದ್ದೇವೆ. ಸದಾಕಾಲವೂ ಹೀಗೇ ಇರೋಣ. ತಪ್ಪು ಮಾಡಿದರೆ ತಿದ್ದಿ ಬುದ್ದಿ ಹೇಳಿ. ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹ ನೀಡಿ ಎಂದು ‌ಮನವಿ ಮಾಡಿದರು.

ಮುಸಲ್ಮಾನ್ ಬಾಂಧವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಸೈಕಲ್‌ ಶಾಪ್, ಕಬ್ಬಿಣದ ಅಂಗಡಿಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯಲು ಬಿಡದೇ ಅಕ್ಷರ ಕಲಿಸಿದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾಗಲು ಅನುಕೂಲವಾಗುತ್ತದೆ ಎಂದರು. 

ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ಖುರ್‌ಆನ್‌ನಲ್ಲಿ ಮಾನವ ಕುಲಕ್ಕೆ ಅಲ್ಲಾಹುವಿನ ಸಂದೇಶವಿದೆ. ದೇವನೊಬ್ಬ ನಾಮ ಹಲವು ಎಂದು ಹೇಳಲಾಗಿದೆ. ಎಲ್ಲರೂ ಅಣ್ಣ ತಮ್ಮಂದಿರಂತೆ ಇರೋಣ ಎಂದರು. 

ಜೆಡಿಎಸ್ ಮುಖಂಡ ಕೆ.ಬಿ. ಕಲ್ಲೇರುದ್ರೇಶ್ ಮಾತನಾಡಿ, ತಾಲ್ಲೂಕಿನಲ್ಲಿ ಹಿಂದೂ, ಮುಸ್ಲಿಮರು ಅಣ್ಣ-ತಮ್ಮಂದಿರಂತೆ ಇದ್ದೇವೆ. ಈ ಸಾಮರಸ್ಯದ ವಾತಾವರಣ ರಾಜ್ಯಾದ್ಯಂತ ಹರಡಲಿ ಎಂದರು.

ಕಾಂಗ್ರೆಸ್ ಮುಖಂಡ ಕೆ.ಪಿ.ಪಾಲಯ್ಯ, ಜಾಮೀಯ ಮಸ್ಜೀದ್ ಅಧ್ಯಕ್ಷ ಅತ್ತರ್‌ವುಲ್ಲಾ ಖಾನ್, ಮುಖಂಡರಾದ ಮೊಹಮದ್ ಅನ್ವರ್, ಇಕ್ಬಾಲ್ ಅಹಮದ್ ಖಾನ್, ಇಮಾಮ್ ಅಲಿ, ಶಂಷೀರ್ ಅಹಮದ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!