ಪ್ರಶಸ್ತಿಗಳು ಸಾಮಾಜಿಕ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡುತ್ತವೆ

ಮಂತ್ರಾಲಯ ಶ್ರೀಗಳಿಂದ `ಪರಿಮಳ ಪ್ರಶಸ್ತಿ’ ಸ್ವೀಕರಿಸಿದ ಸಂದರ್ಭದಲ್ಲಿ  ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ, ಏ. 4- ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ‘ಪರಿಮಳ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲತಾ ಮಲ್ಲಿಕಾರ್ಜುನ್ ಅವರ ಸಾಮಾಜಿಕ ಸೇವೆ ಗುರುತಿಸಿರುವ ಸ್ಪೇಸ್ ಮೀಡಿಯಾ ಸಂಸ್ಥೆಯವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈಚೆಗೆ ಮಂತ್ರಾಲಯ ಮಠದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಂತ್ರಾಲಯ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದಂಗಳವರು ‘ಪರಿಮಳ ಪ್ರಶಸ್ತಿ’ ನೀಡಿ ಆಶೀರ್ವದಿಸಿದರು. 

ಪ್ರಶಸ್ತಿಗಳು ಜವಾಬ್ಬಾರಿಯನ್ನು ಹೆಚ್ಚಿಸುತ್ತವೆ. ಇನ್ನೂ ಹೆಚ್ಚು ಹೆಚ್ಚು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡುತ್ತಿವೆ. ಪ್ರಶಸ್ತಿಗಳನ್ನು ಪಡೆಯುವುದು ಮುಖ್ಯವಲ್ಲ, ಅದಕ್ಕೆ ತಕ್ಕಂತೆ ಜನಪರವಾಗಿ ಕೆಲಸ ಮಾಡುವ ಗುರುತರ ಹೊಣೆ ನನ್ನ ಮೇಲಿದೆ ಎಂದು ಎಂ.ಪಿ. ಲತಾ ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.  

ನಾಡಿನ ಕೋಟ್ಯಾಂತರ ಜನರ ಆರಾಧ್ಯ ದೈವ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪ್ರಶಸ್ತಿ ಪಡೆದುಕೊಂಡಿರುವುದು ಹೆಚ್ಚು ಸಂತಸ ತಂದಿದೆ. 

ಪ್ರಶಸ್ತಿ ಸ್ವೀಕರಿಸಿದ ಬಳಿಕ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ತೆರಳಿ ಶ್ರೀ ಗುರು ರಾಯರ ಗದ್ದುಗೆಯ ಆಶೀರ್ವಾದ ಪಡೆಯಲಾಯಿತು. ಗುರು ರಾಯರ ಆಶೀರ್ವಾದ ಸದಾ ನಾಡಿಗೆ ಒಳಿತು ತರಲಿ ಎಂದು ಬೇಡಿಕೊಳ್ಳಲಾಯಿತು ಎಂದು ಎಂ.ಪಿ.ಲತಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. 

ಪಂಚಪೀಠದ ಶ್ರೀ ರಂಭಾಪುರಿ ಪೀಠದ ಶಾಖಾ ಮಠ ಚಳಗೇರಿ ಮಠದಿಂದ ‘ಸಮಾಜ ಸೇವಾ ಸಿರಿ’, ಶ್ರೀ ಉಜ್ಜಯಿನಿ ಪೀಠದ ಶಾಖಾ ಮಠ ಮಾನಿಹಳ್ಳಿ ಪುರವರ್ಗ ಮಠದಿಂದ ‘ಪ್ರಜಾ ಸಿರಿ’, ಸ್ಪೇಸ್ ಮೀಡಿಯಾ ಸಂಸ್ಥೆ ವತಿಯಿಂದ ‘ತ್ರಿಜಲ ಸಂಗಮ’ ಪ್ರಶಸ್ತಿ ಲಭಿಸಿವೆ. ಇದೀಗ ಸ್ಪೇಸ್ ಮಿಡಿಯಾ ಸಂಸ್ಥೆ ವತಿಯಿಂದ ಮತ್ತೊಂದು ‘ಪರಿಮಳ ಪ್ರಶಸ್ತಿ’ ನೀಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಷಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶಂಕರ್ ಬಿದರಿ, ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವೀಣಾ ವಿಜಯಾನಂದ ಕಾಶೆಪ್ಪನವರ್, ಸ್ಪೇಸ್ ಮೀಡಿಯಾ ಸಂಸ್ಥೆಯ ವ್ಯವಸ್ಥಾಪಕ  ಗುರುದತ್ ಕುಲಕರ್ಣಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಸಹೋದರ ಸುರೇಂದ್ರಕುಮಾರ್ ಹೆಗ್ಗಡೆ, ಶೇಷಾ ಸುಹೇನ್ ಉಪಸ್ಥಿತರಿದ್ದರು.

error: Content is protected !!