ಹರಿಹರ, ಫೆ.16- ನಗರದಲ್ಲಿ ದಿನಾಂಕ 12 ರಂದು ನಡೆದ ಇತಿಹಾಸ ಪ್ರಸಿದ್ಧ ಹರಿಹರೇಶ್ವರ ಸ್ವಾಮಿ ರಥೋತ್ಸವದ ವೇಳೆ ಸಾರ್ವಜನಿಕರು ಮತ್ತು ಅಂಗಡಿ ಮುಂಗಟ್ಟುದಾರರು, ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಸವನ್ನು ಹರಡಿ ಹೋಗಿರುವುದನ್ನು ನಗರಸಭೆಯ ಸಿಬ್ಬಂದಿಗಳು ಸ್ವಚ್ಛತೆ ಮಾಡುವ ಮೂಲಕ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಅರ್ಚಕರಾದ ಶ್ರೀನಿವಾಸ್ ಮೂರ್ತಿ, ಗುರುಪ್ರಸಾದ್, ನಗರಸಭೆ ಸಿಬ್ಬಂದಿಗಳು, ದೇವಸ್ಥಾನದ ಸಿಬ್ಬಂದಿಗಳು ಹಾಜರಿದ್ದರು.