ಹೊನ್ನಾಳಿ, ಡಿ. 27 – ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಪಟ್ಟಣದ ಕೃಷಿ ಇಲಾಖೆ ವತಿಯಿಂದ ಟಿಎಪಿಸಿ ಎಂಎಸ್ ಆವರಣದಲ್ಲಿ ಈಚೆಗೆ ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆಯಡಿ ತರಬೇತಿ ಕಾರ್ಯಕ್ರಮ ಹಾಗೂ ಕಿಸಾನ್ ಗೋಷ್ಠಿ ನಡೆಯಿತು.
ಈ ವೇಳೆ ಕೃಷಿಯಲ್ಲಿ ಸಾಧನೆ ಗೈದ ತಾಲ್ಲೂಕಿನ ಪ್ರಗತಿ ಪರ ರೈತರಾದ ಅಣ್ಣಪ್ಪ, ರಾಜು, ಚನ್ನೇ ಶಪ್ಪ, ಕೆ.ಎನ್. ಪರಮೇಶ್ವರಪ್ಪ ಮತ್ತು ಮೀನಾಕ್ಷಮ್ಮ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾ ಯಕ ಕೃಷಿ ನಿರ್ದೇಶಕಿ ಎ.ಎಸ್. ಪ್ರತಿಮಾ, ರೈತ ಸಂಘದ ಕೆ.ಸಿ ಬಸಪ್ಪ, ಬಣಕಾರ ಬಸಪ್ಪ, ಕರಿಬಸಪ್ಪ, ಜಗದೀಶ, ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯ ರುದ್ರನಾಯ್ಕ ಇತರರು ಇದ್ದರು.