ಅಮಿತ್ ಷಾ ಅಣಕು ಶವಯಾತ್ರೆಯೊಂದಿಗೆ ಪ್ರತಿಭಟನೆ

ಅಮಿತ್ ಷಾ ಅಣಕು ಶವಯಾತ್ರೆಯೊಂದಿಗೆ ಪ್ರತಿಭಟನೆ

ಹೊನ್ನಾಳಿ, ಡಿ. 26 –  ಡಾ. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಕೊಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.  

ಅವರು ಇಡೀ ರಾಷ್ಟ್ರದ ಜನತೆಯ ಕ್ಷಮೆ ಕೇಳಬೇಕು ಎಂದು ಡಿ.ಎಸ್.ಎಸ್. ಸಂಚಾಲಕ ದಿಡಗೂರು ಜಿ.ಎಚ್.ತಮ್ಮಣ್ಣ ಅವರು ಅಗ್ರಹಿಸಿದರು.

 ತಾಲ್ಲೂಕು ಮಾದಿಗ ಮತ್ತು ಮಾದಿಗ ಉಪ ಜಾತಿಗಳ ಹೋರಾಟ ಸಮಿತಿಗಳ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್,ಎ,.ಉಮಾಪತಿ ಮಾತನಾಡಿ, ಸಂವಿದಾನವನ್ನು ದೇಶಕ್ಕೆ ಕೊಟ್ಟಂತಹ ಒಬ್ಬ ಮಹಾನ್ ಮೇಧಾವಿ ನಾಯಕನ ಬಗ್ಗೆ ಹಗುರವಾದ ಮಾತುಗಳನ್ನು ಬಳಸಿರುವುದು ಸರಿಯಲ್ಲ  ಎಂದು ಹೇಳಿದರು.

ಟಿ.ಬಿ. ವೃತ್ತದ ಕನಕದಾಸ ಪ್ರತಿಮೆಯಿಂದ ನೂರಾರು ಮುಖಂಡರು ಅಮಿತ್ ಶಾ ಅವರ ಅಣಕು ಶವಯಾತ್ರೆ ಮಾಡಿಕೊಂಡು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಅಲ್ಲಿ ಅಣಕು ಶವ ದಹನ ನಡೆಸಿದರು. 

ನಂತರ ತಾಲ್ಲೂಕು ಕಚೇರಿಗೆ ಆಗಮಿಸಿ ಅನೇಕ ಮುಖಂಡರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಶಿರಸ್ತೇದಾರ್ ಮಂಜುನಾಥ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. 

ಈ ಪ್ರತಿ ಭಟನೆನಯಲ್ಲಿ ಡಿ.ಎಸ್.ಎಸ್.ನ ಕುರುವ ಮಂಜುನಾಥ್, ಮಾರಿಕೊಪ್ಪದ ಮಂಜಪ್ಪ, ಕರವೇ ಶ್ರೀನಿವಾಸ್, ಮಂಜು, ದೇವು, ರಾಜಪ್ಪ, ಹನುಮಂತಪ್ಪ ಸೇರಿದಂತೆ ಅನೇಕ ದಲಿತ ಮುಖಂಡರು ಇದ್ದರು. 

error: Content is protected !!