ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ವಿರುದ್ಧ ಹೋರಾಡಬೇಕು-ನ್ಯಾಯಾಧೀಶ ವಿ.ಎಲ್. ಅಮರ್ ಕರೆ

ದಾವಣಗೆರೆ, ಡಿ. 26 – ಬಾಲ್ಯ ವಿವಾಹ ಪದ್ಧತಿ, ಬಾಲ ಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆಯ ವಿರುದ್ಧ ಹೋರಾಡುವ ಮನೋಭಾವನೆಯನ್ನು ಮಕ್ಕಳು ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ನ್ಯಾಯಾಧೀಶರಾದ ವಿ.ಎಲ್. ಅಮರ್ ಕರೆ ನೀಡಿದರು.

ನಗರದ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಶಾಲಾ ಸಮುಚ್ಛಾಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ `ಮಕ್ಕಳಿಗಾಗಿ ಕಾನೂನು ಅರಿವು-ನೆರವು’ ಕಾರ್ಯಕ್ರಮ ದಲ್ಲಿ ಮಾತನಾಡಿದರು ಕಾನೂನುಗಳ ಅರಿವು-ನೆರವು  ಪ್ರತಿಯೊಬ್ಬ ಮಕ್ಕಳ ಆಜನ್ಮಸಿದ್ದ ಹಕ್ಕು ಎಂದರು.

ಬಿ.ಹೆಚ್. ಮಂಜುನಾಥ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು.ಹಾಗಾಗಿ ಸಂವಿಧಾನದ ಪ್ರಸ್ತಾವನೆಯನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಬೇಕೆಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು ಮಾತನಾಡಿ, ಮಕ್ಕಳು ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ ಅವರು, ಕಾನೂನು ಅರಿವು-ನೆರವು ಕಾರ್ಯಕ್ರಮ ಅರ್ಥಪೂರ್ಣವಾದುದು. ಪ್ರತಿಯೊಬ್ಬ ವಿದ್ಯಾರ್ಥಿ ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. 

ಆಡಳಿತಾಧಿಕಾರಿ ಎಸ್.ಆರ್. ಶಿರಗಂಬಿ, ಪ್ರಾಂಶುಪಾಲರಾದ ಎ.ಎನ್. ಕುಸುಮ, ಮುಖ್ಯೋಪಾಧ್ಯಾಯ ಎಸ್. ಮಂಜುನಾಥ್, ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಸಾದ್ ಬಂಗೇರಾ, ಬಿ.ಆರ್.ಸಿ. ಚೌಡಪ್ಪ, ಸಿಆರ್‌ಪಿ ರಮೇಶ್, ಟಿಪಿಓ ವಿಜಯಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ಕೆ.ಜಿ. ಭಾರತಿ ಸಂವಿಧಾನ ಪ್ರಸ್ತಾವನೆಯ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕಿ ಹೆಚ್.ಎಂ. ಅನ್ನಪೂರ್ಣ ಸ್ವಾಗತಿಸಿದರು. ಶಿಕ್ಷಕಿ ಬಿ.ಆರ್. ಅನೂಷಾ ವಂದಿಸಿದರು. ಶಿಕ್ಷಕ ಪಿ. ದಿವಾಕರ್ ನಿರೂಪಿಸಿದರು. 

error: Content is protected !!