ಡಾ.ಮನಮೋಹನ್ ಸಿಂಗ್ ನಿಧನ : ಜಿಲ್ಲಾ ಕಸಾಪದಿಂದ ಇಂದು ಸಂತಾಪ ಸೂಚಕ ಸಭೆ

ವಿಶ್ವ ಕಂಡ ಶ್ರೇಷ್ಠ  ಅರ್ಥಶಾಸ್ತ್ರಜ್ಞ, ಭಾರತ ದೇಶದ ಆರ್ಥಿಕ ಭದ್ರತೆಗೆ ಭದ್ರ ಬುನಾದಿ ಹಾಕಿದ್ದ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತಂದಿದ್ದ 10 ವರ್ಷಗಳ ಕಾಲ ದೇಶದ ಭಾರತದ ಪ್ರಧಾನಮಂತ್ರಿಯಾಗಿದ್ದ ಡಾ. ಮಾನಮೋಹನ್ ಸಿಂಗ್ ಅವರ ನಿಧನಕ್ಕೆ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ ವ್ಯಕ್ತ ಪಡಿಸಿದೆ.

ಡಾ. ಮಾನಮೋಹನ್ ಸಿಂಗ್ ಅವರ ಸ್ಮರಣಾರ್ಥವಾಗಿ ನುಡಿ ನಮನ  ಹಾಗೂ ಸಂತಾಪ ಸೂಚಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕುವೆಂಪು ಕನ್ನಡ ಭವನದಲ್ಲಿ ಇಂದು ಮಧ್ಯಾಹ್ನ 11.30ಕ್ಕೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ.

error: Content is protected !!