ಹರಿಹರ,ಡಿ.24- ನಗರದ ಹೊರ ವಲಯದಲ್ಲಿರುವ ಶ್ರೀ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಪಂಚಲೋಹದ ಮೂರ್ತಿಯ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಮೆರವಣಿಗೆ ತುಂಗಭದ್ರಾ ನದಿಯ ಆವರಣದಿಂದ ಆರಂಭಗೊಂಡು, ರಾಜಬೀದಿಗಳ ಮೂಲಕ ಹಾದು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಅಂತ್ಯಗೊಂಡಿತು. ಸಂಜೆ ಭಕ್ತರ ಸಮ್ಮುಖದಲ್ಲಿ ಶ್ರೀ ಸ್ವಾಮಿಯ ಕಾರ್ತಿಕೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಗಜಾಪುರದ ವೀರಯ್ಯ ಸ್ವಾಮಿ, ಹೆಚ್.ಎಂ. ಹಾಲ ಸ್ವಾಮಿ, ಐರಣಿ ಕೊಟ್ರೇಶ್, ಬಸವರಾಜ್, ಕರಿಬಸಪ್ಪ, ಚೆನ್ನೇಶ್, ಸಮಾಳ ಚಂದ್ರಪ್ಪ, ದಯಾನಂದ ಇತರರು ಇದ್ದರು.