ಮನುಕುಲಕ್ಕೆ ಅನ್ನ ನೀಡುವ ರೈತರೇ ಆದರ್ಶ ವ್ಯಕ್ತಿಗಳು

ಮನುಕುಲಕ್ಕೆ ಅನ್ನ ನೀಡುವ ರೈತರೇ ಆದರ್ಶ ವ್ಯಕ್ತಿಗಳು

ಹರಿಹರ, ಡಿ.24- ದೇಶದ ಮನುಕುಲಕ್ಕೆ ಅನ್ನವನ್ನು ನೀಡುವ ರೈತರೇ ಇಂದಿನ ಸಮಾಜದ ಆದರ್ಶ ವ್ಯಕ್ತಿಗಳು ಎಂದು ಉಪನ್ಯಾಸಕ ಗುರುಬಸವರಾಜಯ್ಯ ಹೇಳಿದರು. 

ನಗರದ ಹೊರವಲಯದ ಶಿವನಹಳ್ಳಿ ಗ್ರಾಮದ ಚಂದ್ರಶೇಖ ರಯ್ಯನವರ ತೋಟದಲ್ಲಿ ಆವರಣ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟಿನವರು ಆಯೋಜಿಸಿದ್ದ ರೈತರ ದಿನದ ಆಚರಣೆಯಲ್ಲಿ ಅವರು ಮಾತನಾಡಿದರು. 

ರೈತರು ದೇಶದ ಬೆನ್ನೆಕುಬು ಆಗಿರುವುದರಿಂದ ಗೌರವಿಸುವಂತೆ ಆಗಬೇಕು. ಭಾರತದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ಗೌರವಿಸಲು ಈ ರಾಷ್ಟ್ರೀಯ ರೈತ ದಿನಾಚರಣೆಯನ್ನು 2001ರಲ್ಲಿ ಆರಂಭಿಸಲಾಯಿತು. ಪ್ರತಿ ತುತ್ತು ಸ್ವೀಕರಿಸುವಾಗ ರೈತರನ್ನು ಸ್ಮರಿಸಿ ತೆಗೆದುಕೊಳ್ಳಬೇಕು, ಅನ್ನದಾತನ ಬಾಳು ಸುಖಮಯವಾಗಬೇಕೆನ್ನುವುದು ಪ್ರತಿಯೊಬ್ಬರ ಆಶಯವಾಗಬೇಕಿದೆ ಎಂದರು.

ಗ್ರಾಮದ ರೈತ ಮುಖಂಡರಾದ ಚಂದ್ರಶೇಖರಯ್ಯ ಮಾತನಾಡಿ, ನಮಗೆ ಅನ್ನದಾತರಾದ ರೈತರನ್ನು ಸ್ಮರಿಸುವ ಹಾಗೂ ಅವರನ್ನು ಗೌರವಿಸುವ ಈ ರೈತ ದಿನಾಚರಣೆ ನಿಜಕ್ಕೂ ಹೆಮ್ಮ ತರುವ ವಿಷಯವಾಗಿದೆ. ರೈತ ಕಷ್ಟಪಟ್ಟು ಬೆಳೆಯನ್ನು ಬೆಳೆಯುವರು. ಆದರೆ, ಆ ಬೆಳೆಗೆ ಅಮೂಲ್ಯವಾದ ಬೆಲೆ ಸಿಗದೆ ನೋವನ್ನು ಅನುಭವಿಸುತ್ತಾನೆ. ರೈತ ಬೆಳೆದ ಬೆಳೆಗೆ ಉತ್ತಮವಾದ ಬೆಲೆ ದೊರಕಿದಾಗ ಮಾತ್ರ ಅನ್ನದಾತನ ಬಾಳು ಬೆಳಕಾಗುವುದು ಎಂದರು. 

ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟಿನ ಕೃಷಿ ಮೇಲ್ವಿಚಾರಕ ದೇವರಾಜ್ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಎಂ.ಎಸ್.ರೇವಣಸಿದ್ದಪ್ಪ, ಹಿರಿಯ ರೈತರಾದ ಎಂ.ರುದ್ರಪ್ಪ, ಅನಿಲ್ ಕುಮಾರ್, ಪಿ.ಜಿ.ಮಹೇಶ್, ಜಿ.ಎನ್.ಗಂಗಣ್ಣ ಉಪಸ್ಥಿತರಿದ್ದರು.

error: Content is protected !!